ರಾಷ್ಟ್ರೀಯ

29 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸೋಲಿಸಿದ್ದು 29ರ ಯುವಕ

Pinterest LinkedIn Tumblr


ಹೊಸದಿಲ್ಲಿ: ಬುಧವಾರ ಪ್ರಕಟಗೊಂಡ ಉತ್ತರ ಪ್ರದೇಶ ಲೋಕಸಭೆ ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಪಾಲಿಗೆ ಗೋರಾಖ್‌ಪುರವು gored-akhpur ಆಗಿದೆ. 29 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದ್ದ ಗೋರಾಖ್‌ಪುರ ಲೋಕಸಭೆ ಕ್ಷೇತ್ರವನ್ನು 29 ವರ್ಷದ ಯುವಕ ಬಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್‌ 5 ಬಾರಿ ಸಂಸದರಾಗಿ ಅರಸಿ ಬಂದಿದ್ದ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಯುವ ನಾಯಕ ಪ್ರವೀಣ್‌ ಕುಮಾರ್ ನಿಶಾದ್‌ 21,000 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

2011ರಲ್ಲಿ ಲಖನೌನ ಗೌತಮ ಬುದ್ಧ ವಿವಿಯಲ್ಲಿ ನಿಶಾದ್‌ ಇಂಜಿನಿಯರಿಂಗ್‌ ಪದವಿ ಪಡೆದರು. ಯಾವುದೇ ಪ್ರಕರಣಗಳು ಈತನ ಮೇಲಿಲ್ಲ. ಚುನಾವಣೆ ಸ್ಪರ್ಧೆಗೂ ಮೊದಲು ಘೋಷಿಸಿಕೊಂಡ ಒಟ್ಟು ಆಸ್ತಿ 11 ಲಕ್ಷ ರೂ. ಇದರಲ್ಲಿ 99,000 ರೂ. ಸಾಲವು ಸೇರ್ಪಡೆಗೊಂಡಿದೆ. ಪತ್ನಿ ಸರಕಾರಿ ಉದ್ಯೋಗದಲ್ಲಿದ್ದು, ಇಬ್ಬರು ಮಕ್ಕಳಿದ್ದಾರೆ.

Comments are closed.