ಕರ್ನಾಟಕ

ಉ.ಪ್ರದೇಶ ಸೋಲು, ತೃತೀಯ ಶಕ್ತಿಗೆ ಹೊಸ ರೂಪ ನೀಡಬಹುದು: ದೇವೇಗೌಡ

Pinterest LinkedIn Tumblr


ಹಾಸನ: ಉತ್ತರ ರಾಜ್ಯಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಗಿದೆ, ಇದರ ಜತೆ ಕಾಂಗ್ರೆಸ್‌ ಶಕ್ತಿ ಕ್ಷೀಣಿಸುತ್ತಿದೆ ಹೀಗಾಗಿ ದೇಶದಲ್ಲಿ ತೃತೀಯ ಶಕ್ತಿಗೆ ಒಂದು ರೂಪ ಸಿಗಬಹುದು ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿರುವ ದೇವೇಗೌಡ, ಉತ್ತರ ಪ್ರದೇಶದ ಚುನಾವಣೆ ಹಾಗೂ ಕಾಂಗ್ರೆಸ್‌ ಶಕ್ತಿ ಕ್ಷೀಣಿಸುವಿಕೆ ರಾಷ್ಟ್ರ ರಾಜಕಾರಣದ ಮೇಲೆ ಕಂಡಿತವಾಗಿಯೂ ಪರಿಣಾಮ ಬೀರಬಹುದು, ಆದರೆ ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡ ಬೇಕಷ್ಟೆ,ಅಲ್ಲದೇ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿ ದೂರ ಇಟ್ಟೇ ಜನರ ಬಳಿ ಹೋಗುತ್ತೇವೆ ಎಂದು ಹೇಳಿದ್ದಾರೆ.

ಭಿನ್ನ ಮತೀಯ ಶಾಸಕರ ಅನರ್ಹತೆ ಸಂಬಂಧ ಹೈಕೋರ್ಟ್‌ಗೆ ಹೋಗುತ್ತೇವೆ ಎಂದಿರುವ ದೇವೇಗೌಡ, ಈ ಬಾರಿಯೂ ಕಾಂಗ್ರೆಸ್‌ಗೆ ಮತ ಎಂದಿರುವುದು ಉದ್ಧಟತನ ಎಂದಿದ್ದಾರೆ. ಇದೇ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮದ ‌‌ವಿಚಾರದಲ್ಲಿ ನಾವ್ಯಾರು ಕೈ ಹಾಕಲಿಲ್ಲ, ನಾವು ಎಲ್ಲಾ ಸ್ವಾಮೀಜಿಗೂ ನಡೆದುಕೊಂಡಿದ್ದೇವೆ, ನಮಗೆ ವ್ಯತ್ಯಾಸ ಗೊತ್ತಿಲ್ಲ ಎಂದಿದ್ದಾರೆ. ಆದರೆ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ಮಾತನಾಡಲು ನಿರಾಕರಣೆ ಮಾಡಿದ್ದಾರೆ.

Comments are closed.