ರಾಷ್ಟ್ರೀಯ

ಪಾಕ್ ಗಾಯಕನಿಗೆ ಭಾರತೀಯ ಪೌರತ್ವ ನೀಡುವುದಾದರೆ ನನಗ್ಯಾಕಿಲ್ಲ: ಸಿರಾಜ್ ಖಾನ್

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ನಾಗರಿಕತ್ವ ಪಡೆಯುವ ಆಕಾಂಕ್ಷೆ ಹೊತ್ತಿದ್ದ, ಬಾಲ್ಯದಿಂದಲೂ ಇಲ್ಲಿಯೇ ನೆಲೆಸಿದ್ದ ಪಾಕ್ ಮೂಲದ ಸಿರಾಜ್ ಖಾನ್ ಎಂಬಾತನ ಕರುಣಾಜನಕ ಕಥೆ ಇದು. ಕಳೆದ 23 ವರ್ಷಗಳಿಂದ ಇಲ್ಲಿಯೇ ನೆಲೆಸಿ, ಬದುಕು ಕಂಡುಕೊಂಡಿದ್ದ ಆತನನ್ನೀಗ ಗಡಿಪಾರು ಮಾಡಲಾಗಿದೆ. ಭಾರತೀಯಳಾದ ಆತನ ಪತ್ನಿ ಮತ್ತು ಮಕ್ಕಳು ಭಾರತದಲ್ಲಿದ್ದು ಕುಟುಂಬವೀಗ ಇಕ್ಕಟ್ಟಿಗೆ ಸಿಲುಕಿದೆ.

ಕಳೆದ 9 ವರ್ಷಗಳಿಂದ ಭಾರತದ ಪೌರತ್ವ ಪಡೆಯಲು ಒದ್ದಾಡುತ್ತಿದ್ದ ಸಿರಾಜ್‌ಗೆ ಕೊನೆಗೂ ನಿರಾಶೆಯಾಗಿದ್ದು, ಕಳೆದ ಸೋಮವಾರ ಆತನನ್ನು ಭಾರತದಿಂದ ಗಡೀಪಾರು ಮಾಡಲಾಗಿದೆ.

ಸದ್ಯ ಪಾಕಿಸ್ತಾನದಲ್ಲಿರುವ ಸಿರಾಜ್ ದೂರವಾಣಿ ಮೂಲಕ ವಿಜಯ ಕರ್ನಾಟಕದ ಸೋದರ ಪತ್ರಿಕೆಯಾದ ಮುಂಬಯಿ ಮಿರರ್ ಜತೆ ಮಾತನಾಡಿದ್ದು, 14 ವರ್ಷ ಭಾರತದಲ್ಲಿ ವಾಸಿಸಿದ್ದ ಪಾಕ್ ಗಾಯಕನಿಗೆ ಇಲ್ಲಿನ ಪೌರತ್ವ ಸಿಗುತ್ತದೆ ಅಂದಾದರೆ 23 ವರ್ಷಗಳಿಂದ ಇಲ್ಲಿಯೇ ಬದುಕು ಕಟ್ಟಿಕೊಂಡಿರುವ ನನಗ್ಯಾಕೆ ಸಿಗಲಾರದು. ನಾನೊಬ್ಬ ಸಾಮಾನ್ಯ ವ್ಯಕ್ತಿ ಎಂಬುದೇ ಈ ತಾರತಮ್ಯಕ್ಕೆ ಕಾರಣವಾ? ಎಂದು ಪ್ರಶ್ನಿಸಿದ್ದಾನೆ.

ಕಾನೂನುಬದ್ಧವಾಗಿ ಭಾರತದಲ್ಲಿರಲು ಅವಕಾಶ ಕೊಟ್ಟು ಪತ್ನಿ- ಮಕ್ಕಳ ಜತೆ ಬದುಕಲು ಬಿಡಿ, ಅಥವಾ ಅವರನ್ನು ಪಾಕಿಸ್ತಾನಕ್ಕೆ ಬರಲು ಬಿಡಿ. ನಾನು ಯಾವ ಅಪರಾಧವನ್ನು ಮಾಡಿಲ್ಲ, ಅಗತ್ಯವಿದ್ದರೆ ಪೊಲೀಸ್ ಠಾಣೆಯಲ್ಲಿ ಪರಿಶೀಲಿಸಿ ಎಂದು ಅಮಾಯಕ ಸಿರಾಜ್ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾನೆ.

10 ವರ್ಷದ ಬಾಲಕನಿದ್ದಾಗ ಪರೀಕ್ಷೆಗೆ ಹೆದರಿ ಮನೆಯಿಂದ ಪಲಾಯನ ಮಾಡಿದ್ದ ಸಿರಾಜ್, ಕರಾಚಿಯಲ್ಲಿದ್ದ ಸಂಬಂಧಿಕನ ಮನೆಗೆ ಹೋಗುವ ಉದ್ದೇಶದಿಂದ ರೈಲನ್ನೇರಿದ್ದ. ಆದರೆ ಆತ ತಲುಪಿದ್ದು ಪಂಜಾಬ್‌ನ ಅಮೃತ್ ಸರಕ್ಕೆ. ಸ್ವಲ್ಪ ಕಾಲ ಗುಜರಾತಿನಲ್ಲಿದ್ದ ಆತ ಬಳಿಕ ಮುಂಬೈಗೆ ಬಂದು ನೆಲೆಸಿ ಸಾಜಿದಾ ಎಂಬಾಕೆಯನ್ನು ಮದುವೆಯಾಗಿದ್

Comments are closed.