ರಾಷ್ಟ್ರೀಯ

ಅಮೆರಿಕ ಉದ್ಯೋಗ: 68ರ ಹರೆಯದ ವ್ಯಕ್ತಿಗೆ 36 ಲಕ್ಷ ವಂಚನೆ

Pinterest LinkedIn Tumblr


ಥಾಣೆ: ಇಲ್ಲಿನ ವರ್ತಕ ನಗರದ 68 ವರ್ಷ ಪ್ರಾಯದ ವ್ಯಕ್ತಿಯೋರ್ವರಿಗೆ ಕೆಲವು ಅಪರಿಚಿತರು ಅಮೆರಿಕದಲ್ಲಿರುವ ಕಂಪೆನಿಯೊಂದರಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಆಮಿಷ ಒಡ್ಡಿ ಆತನಿಗೆ 36 ಲಕ್ಷ ರೂ. ವಂಚಿಸಿದ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

36 ಲಕ್ಷ ರೂ. ಕಳೆದುಕೊಂಡಿರುವ ಬಲವಂತ ರಾನಡೆ ಅಮೆರಿಕದಲ್ಲಿ ಉದ್ಯೋಗಕ್ಕಾಗಿ ಅಲ್ಲಿನ ಹಲವು ಕಂಪೆನಿಗಳಿಗೆ ಅರ್ಜಿ ಹಾಕಿದ್ದರು. ಕಳೆದ ವರ್ಷ ಜೂನ್‌ನಲ್ಲಿ ರಾನಡೆಗೆ ಅಮೆರಿಕದ ಡಲ್ಲಾಸ್‌ನಲ್ಲಿನ ಪೆಟ್ರೋಲಿಯಂ ಕಂಪೆನಿಯದ್ದೆಂದು ಹೇಳಲಾದ ಒಂದು ಇಮೇಲ್‌ ಬಂದಿತ್ತು.

ಆ ಪ್ರಕಾರ ಲಾರೆನ್ಸ್‌ ಎಂಬ ವ್ಯಕ್ತಿ ರಾನಡೆಯನ್ನು ಸಂಪರ್ಕಿಸಿ ಅಮೆರಿಕ ಉದ್ಯೋಗ ಪಡೆಯುವ ಸಲುವಾಗಿ ವಿವಿಧ ಹಂತಗಳಲ್ಲಿ 36 ಲಕ್ಷ ರೂ.ಗಳನ್ನು ರಾನಡೆಯಿಂದ ಪಡೆದುಕೊಂಡ. ಅಂತಿಮವಾಗಿ ಉದ್ಯೋಗದ ಬಗ್ಗೆ ಯಾವುದೇ ಮಾಹಿತಿ ಸಿಗದಿದ್ದಾಗ ರಾನಡೆಗೆ ತಾನು ಮೋಸ ಹೋಗಿರುವುದು ಖಚಿತವಾಯಿತು.

ರಾನಡೆ ಕೊಟ್ಟಿರುವ ದೂರಿನ ಪ್ರಕಾರ ವರ್ತಕ ನಗರ ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

-ಉದಯವಾಣಿ

Comments are closed.