ಮನೋರಂಜನೆ

ದಕ್ಷಿಣ ಭಾರತದ ಖ್ಯಾತ ನಟನಿಗೆ ಕಪಾಳಮೋಕ್ಷ ಮಾಡಿದ್ದೆ: ರಾಧಿಕಾ ಆಪ್ಟೆ

Pinterest LinkedIn Tumblr

ಮುಂಬೈ: ಭಾರತೀಯ ಚಿತ್ರರಂಗದ ಗ್ಲಾಮರಸ್ ನಟಿ ರಾಧಿಕಾ ಆಪ್ಟೆ ತಾವು ದಕ್ಷಿಣ ಭಾರತದ ಖ್ಯಾತ ನಟರೊಬ್ಬರ ಕೆನ್ನೆಗೆ ಬಾರಿಸಿದ್ದೆ ಎಂದು ಹೇಳಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ರಾಧಿಕಾ ಆಪ್ಟೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ದಕ್ಷಿಣದಲ್ಲಿ ನನ್ನ ಮೊದಲ ಚಿತ್ರವಾಗಿತ್ತು. ಮೊದಲ ದಿನದ ಚಿತ್ರೀಕರಣದಲ್ಲಿ ಆ ನಟ ನನ್ನ ಪಕ್ಕದಲ್ಲಿ ಬಂದು ಕುಳಿತರು. ನಂತರ ತನ್ನ ಕಾಲಿನಿಂದ ನನ್ನ ಕಾಲಿಗೆ ಉಜ್ಜಿ ಅಸಭ್ಯವಾಗಿ ನಡೆದುಕೊಂಡರು. ಕೂಡಲೇ ನಾನು ಆತನ ಕೆನ್ನೆಗೆ ಬಾರಿಸಿದೆ ಅಂತಾ ರಾಧಿಕಾ ಹೇಳಿಕೊಂಡಿದ್ದಾರೆ.

ಇನ್ನು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಾಧಿಕಾ ಆಪ್ಟೆ ಬಜಾರ್, ಭವೇಶ್ ಜೋಷಿ ಮತ್ತು ದಿ ಆಶ್ರಮ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Comments are closed.