ಅಂತರಾಷ್ಟ್ರೀಯ

ತನ್ನ ಪ್ರೇಯಸಿ ಬೇರೊಬ್ಬನನ್ನು ಚುಂಬಿಸುತ್ತಿದ್ದಾಗ ಸೆಲ್ಫಿ ತೆಗೆದುಕೊಂಡ ಪ್ರಿಯತಮ! ಮುಂದೆ ಏನು ಮಾಡಿದ ?

Pinterest LinkedIn Tumblr

ಬ್ಯೂನಸ್ ಐರಿಸ್: ತನ್ನ ಪ್ರೇಯಸಿ ಬೇರೊಬ್ಬನನ್ನು ಚುಂಬಿಸುತ್ತಿದ್ದಾಗ ಪ್ರಿಯಕರ ಆಕೆಯ ಪಕ್ಕದಲ್ಲೇ ಕುಳಿತು ಸೆಲ್ಫಿ ತೆಗೆದುಕೊಂಡು ಟ್ವಿಟ್ಟರಿನಲ್ಲಿ ಫೋಟೋ ಪ್ರಕಟಿಸಿ ಲವ್ ಬ್ರೇಕಪ್ ಮಾಡಿದ್ದಾನೆ.

ಮಾರಿಯಾನೋ(20) ಯುವತಿಯ ಪ್ರಿಯಕರ. ಮಾರಿಯಾನೋ ಒಬ್ಬಂಟಿಯಾಗಿ ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಿಸ್ ಗೆ ಪಾರ್ಟಿಗೆ ಬಂದಿದ್ದಾನೆ. ಈ ವೇಳೆ ಅಲ್ಲಿ ತನ್ನ ಪ್ರಿಯತಮೆಯನ್ನು ನೋಡಿ ಆಶ್ಚರ್ಯಪಟ್ಟಿದ್ದಾನೆ. ಅಷ್ಟೇ ಅಲ್ಲದೇ ತನ್ನ ಗರ್ಲ್‍ಫ್ರೆಂಡ್ ಬೇರೊಬ್ಬನ ಜೊತೆ ಸಲುಗೆಯಿಂದ ಚುಂಬಿಸಿದ್ದನ್ನು ನೋಡಿ ಮಾರಿಯಾನೋ ಶಾಕ್ ಆಗಿದ್ದಾನೆ.

ಗರ್ಲ್ ಫ್ರೆಂಡ್‍ನ ಆ ರೀತಿಯ ವರ್ತನೆ ಕಂಡು ಮಾರಿಯಾನೋ ತನ್ನ ಸಹನೆಯನ್ನು ಕಳೆದುಕೊಳ್ಳದೇ ಶಾಂತವಾಗಿ ಪಕ್ಕದಲ್ಲೇ ಕುಳಿತುಕೊಂಡು ಇಬ್ಬರು ಚುಂಬಿಸುತ್ತಿರುವಾಗ ಸೆಲ್ಫಿ ತೆಗೆದುಕೊಂಡಿದ್ದಾನೆ. ಆದರೆ ಮಾರಿಯಾನೋ ಆ ಪಾರ್ಟಿಗೆ ಬಂದು ತನ್ನ ಪಕ್ಕದಲ್ಲೇ ಕುಳಿತುಕೊಂಡು ಸೆಲ್ಫಿ ತೆಗೆದುಕೊಂಡಿದ್ದ ವಿಷಯ ಯುವತಿಗೆ ತಿಳಿದಿರಲಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಮಾರಿಯಾನೋ ಆ ಸೆಲ್ಫಿ ಫೋಟೋವನ್ನು ತನ್ನ ಟ್ವಿಟ್ಟರ್‍ನಲ್ಲಿ ಪ್ರಕಟಿಸಿ, ನಾನು ಪಾರ್ಟಿಗೆ ಬಂದಿದ್ದು ಆಕೆಗೆ ಗೊತ್ತಾಗಲಿಲ್ಲ ಎಂದು ಬರೆದುಕೊಂಡಿದ್ದಾನೆ. ನಂತರ ಆತನ ಪ್ರೇಯಸಿ ಪ್ರತಿಕ್ರಿಯಿಸಿದ ಟ್ವೀಟ್ ಸ್ಕ್ರೀನ್ ಶಾಟ್ ತೆಗೆದು ಅದನ್ನು ಕೂಡ ಪೋಸ್ಟ್ ಮಾಡಿದ್ದಾನೆ.

ಈ ಪೋಸ್ಟ್ ನೋಡಿ ಯುವತಿ ನಾನು ಕುಡಿದ ಮತ್ತಿನಲ್ಲಿದ್ದೆ. ಕುಡಿದ ನಶೆಯಲ್ಲಿ ಈ ರೀತಿ ಆಗಿತ್ತು. ಆತ ನನಗೆ ಹಲವು ಸಂಗತಿಗಳನ್ನು ಹೇಳಿ ನನ್ನನ್ನು ಒತ್ತಾಯಿಸುತ್ತಿದ್ದನು. ಆದರೆ ಯಾವಾಗ ಈ ರೀತಿ ಆಯ್ತು ಅನ್ನೋದು ನನಗೆ ಸರಿಯಾಗಿ ತಿಳಿಯಲಿಲ್ಲ. ನಾನು ನಿನ್ನನ್ನೇ ಪ್ರೀತಿಸುತ್ತೇನೆ ಹಾಗೂ ನಿನ್ನ ಜೊತೆಗೆ ಇರುತ್ತೇನೆ ಎಂದು ಯುವತಿ ಹೇಳಿದ್ದಾಳೆ.

ಗೆಳತಿ ನನ್ನಿಂದ ತಪ್ಪಾಗಿದೆ ಎಂದು ಹೇಳಿದರೂ ಮಾರಿಯಾನೋ, ನಿನ್ನನ್ನು ನಾನು ಕ್ಷಮಿಸಲ್ಲ. ಈಗ ಬ್ರೇಕಪ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾನೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

Comments are closed.