ರಾಷ್ಟ್ರೀಯ

ಏರ್ ಇಂಡಿಯಾ ಟ್ವಿಟ್ಟರ್ ಖಾತೆಗೆ ಟರ್ಕಿ ಸೈಬರ್ ಆರ್ಮಿ ಕನ್ನ; ಟರ್ಕಿ ಪರ ಸಂದೇಶ ಹಾಕಿದ ಹ್ಯಾಕರ್ ಗಳು

Pinterest LinkedIn Tumblr

ಹೊಸದಿಲ್ಲಿ: ಏರ್ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆಯನ್ನು ಗುರುವಾರ ಹ್ಯಾಕ್ ಮಾಡಲಾಗಿದ್ದು ಇದರಲ್ಲಿ ಟರ್ಕಿ ಹ್ಯಾಕರ್‌ಗಳ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಸಾವಿರಾರು ಮಂದಿ ಫಾಲೋವರ್ಸ್ ಇರುವ ವೆರಿಫೈಡ್ ಖಾತೆ ಇದೀಗ ಹ್ಯಾಕರ್‌ಗಳ ಪಾಲಾಗಿದೆ.

ಹ್ಯಾಕರ್‌ಗಳು ಟ್ವಿಟರ್‌ನ ಕವರ್ ಫೋಟೋದಲ್ಲಿ ಟರ್ಕಿ ಏರ್‌ಲೈನ್ ಫೋಟೋ ಹಾಕಿದ್ದು, ಟರ್ಕಿ ಭಾಷೆಯನ್ನು ತೋರಿಸುತ್ತಿದೆ. ಇದರ ಜತೆಗೆ ಟರ್ಕಿ ಪರವಾದ ಟ್ವೀಟ್‌ಗಳನ್ನು ಮಾಡಲಾಗುತ್ತಿದೆ. ವೆರಿಫೈಡ್ ಖಾತೆಯ ನೀಲಿ ಬಣ್ಣದ ಟಿಕ್ ಮಾರ್ಕ್ ಸಹ ತೆಗೆಯಲಾಗಿದೆ.

ಏರ್‌ ಇಂಡಿಯಾ ಖಾತೆಯನ್ನು ಟರ್ಕಿ ಸೈಬರ್ ಆರ್ಮಿ ಆಯ್ಯಿಲ್‌ಡಿಜ್ ಟಿಮ್ ಹ್ಯಾಕ್ ಮಾಡಿದೆ ಎಂದು ರೀಟ್ವೀಟ್ ಮೂಲಕ ತಿಳಿಸಿದೆ. ಟ್ವೀಟ್‍ನಲ್ಲಿ “.Your account has been hacked by the Turkish cyber army Ayyildiz Tim.Your DM correspondence and important data have been captured.” ಈ ರೀತಿ ಇದೆ.

ವೈರಿಫೈಡ್ ಖಾತೆಯ ಹ್ಯಾಂಡ್ಲ್ ಬದಲಾದ ಕೂಡಲೆ ಬ್ಲೂ ಟಿಕ್ ಮಾರ್ಕನ್ನು ಟ್ವಿಟರ್ ತಾತ್ಕಾಲಿಕವಾಗಿ ತೆಗೆಯುತ್ತದೆ. ಮತ್ತೆ ಬ್ಲೂ ಟಿಕ್ ಮಾರ್ಕ್ ಪಡೆಯಬೇಕಾದರೆ ಟ್ವಿಟರ್‌ಗೆ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಎಎನ್‍ಐ ವರದಿ ಮಾಡಿದೆ.

Comments are closed.