ಮನೋರಂಜನೆ

ನಟಿ ರವೀನಾ ವಿರುದ್ದ ಎಫ್ಐಆರ್

Pinterest LinkedIn Tumblr


ಭುವನೇಶ್ವರ್: ಒರಿಸ್ಸಾದ ದೇವಸ್ಥಾನದ ‘ನೋ ಕ್ಯಾಮೆರಾ ಜೋನ್’ ದಲ್ಲಿ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ದ ಪ್ರಕರಣ ದಾಖಲಾಗಿದೆ. ಕ್ಯಾಮೆರಾ ಬಳಕೆಗೆ ಅವಕಾಶ ವಿಲ್ಲದ ಸ್ಥಳದಲ್ಲಿ ಚಿತ್ರೀ ಕರಣ ನಡೆಸಲಾಗಿದೆ ಎಂದು ಭುವನೇಶ್ವರದ ಲಿಂಗರಾಜು ದೇವಸ್ಥಾನದ ಆಡಳಿತ ಮಂಡಳಿ ಆರೋಪಿಸಿದೆ.

ಮಂಡಳಿಯ ಆರೋಪವನ್ನು ನಟಿ ರವೀನಾ ಅಲ್ಲಗಳೆದಿದ್ದು, ಯಾವುದೇ ಸಂಸ್ಥೆ ಮತ್ತು ಯಾವುದೇ ಪ್ರಚಾರವಲ್ಲ. ಸ್ಥಳೀಯರು ಹಾಗೂ ದೇವಸ್ಥಾನಕ್ಕೆ ಸೇರಿದವರೇ ಮತ್ತು ಕೆಲವು ಮಾಧ್ಯಮಗಳು ತಮ್ಮ ಮೊಬೈಲಿನಲ್ಲೇ ಚಿತ್ರೀಕರಣ ನಡೆಸಿದ್ದಾರೆ. ದೇವ ಸ್ಥಾನದಲ್ಲಿ ಫೋನ್ ಬಳಕೆ ನಿಷೇಧ ಎಂದು ತಿಳಿದಿರಲಿಲ್ಲ. ಸ್ಥಳೀಯರು ಈ ಕುರಿತು ಮಾಹಿತಿ ನೀಡಿಲ್ಲ ಎಂದು ಹೇಳಿಕೊಂಡಿ ದ್ದಾರೆ.

ದೇವಸ್ಥಾನದೊಳಗೆ ರವೀನಾ ನಟನೆಯ ಸೌಂದರ್ಯ ಕುರಿತ ಟಿಪ್ಸ್ ನೀಡುವ ಜಾಹೀರಾತಿನ ವಿಡಿಯೋ ಚಿತ್ರೀಕರಣ ಮಾಡಲಾಗು ತ್ತಿತ್ತು.

Comments are closed.