ರಾಷ್ಟ್ರೀಯ

ದೆಹಲಿ-ಟೆಲ್‌ ಅವಿವ್‌ ನಡುವೆ ವಾರಕ್ಕೆ ಮೂರು ವಿಮಾನ, ಸೌದಿ ಮೇಲೆ ಹಾದು ಹೋಗಲಿದೆ

Pinterest LinkedIn Tumblr


ದೆಹಲಿ: ರಾಜತಾಂತ್ರಿಕ ಸಂಬಂಧಗಳ ವಿಚಾರದಲ್ಲಿ ಅತ್ಯಂತ ಜಾಣ ನಡೆಯಿಡುತ್ತಾ ಬಂದಿರುವ ನರೇಂದ್ರ ಮೊದಿ ನೇತೃತ್ವದ ಭಾರತ ಸರಕಾರ ಇದೀಗ ಮತ್ತೊಂದು ಮಾಸ್ಟರ್‌ಸ್ಟ್ರೋಕ್‌ಗೆ ಮುಂದಾಗಿದೆ. ಇನ್ನು ಮುಂದೆ ದೆಹಲಿಯಿಂದ ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ಗೆ ವಾರಕ್ಕೆ ಮೂರು ವಿಮಾನಗಳ ಹಾರಾಟ ನಡೆಯಲಿದೆ. ಮತ್ತೂ ಅಚ್ಚರಿಯ ವಿಚಾರವೆಂದರೆ ವಿಮಾನಗಳು ಇಸ್ರೇಲ್‌ನ ಕಟ್ಟಾ ವೈರಿ ಸೌದಿ ಅರೇಬಿಯಾದ ವಾಯು ಪ್ರದೇಶದ ಮೇಲೆ ಹಾದು ಹೋಗಲಿವೆ.

ಕಳೆದ ಜುಲೈನಲ್ಲಿ ಪ್ರಧಾನ ಮಂತ್ರಿ ಮೋದಿ ಇಸ್ರೇಲ್‌ ಪ್ರವಾಸ ಹಾಗು ಜನವರಿಯಲ್ಲಿ ಇಸ್ರೇಲ್‌ ಪ್ರಧಾನಿ ಬೆಂಝಮಿನ್‌ ನೆತನ್ಯಾಹು ಭಾರತ ಪ್ರಾಸದ ವೇಳೆ ಉಭಯ ದೇಶಗಳ ನಡುವಿನ ಜನರನ್ನು ಮತ್ತಷ್ಟು ಹತ್ತಿರಕ್ಕೆ ತರುವ ಧ್ಯೇಯೋದ್‌ಏಶ ವ್ಯಕ್ತಪಡಿಸಲಾಗಿತ್ತು.

Comments are closed.