ರಾಷ್ಟ್ರೀಯ

ದೇವಾಲಯಕ್ಕೆ ಅರ್ಪಿಸುವ ಹೂಗಳಿಂದ ಸುಗಂಧ ದ್ರವ್ಯ ತಯಾರಿಸಲಿರುವ ವಿಧವೆಯರು

Pinterest LinkedIn Tumblr


ಮಥುರಾ: ಬಂಕೆ ಬಿಹಾರಿ ಹಾಗೂ ಇಸ್ಕಾನ್‌ಗಳಂತಹ ಪ್ರಸಿದ್ಧ ದೇವಾಲಯಗಳಿಗೆ ಅರ್ಪಿಸುವ ಹೂವುಗಳಿಂದ ಮಥುರಾ-ವೃಂದಾನವ ಅಶ್ರಮದ ವಿಧವೆಯರು ಸುಗಂಧ ದ್ರವ್ಯಗಳನ್ನು ತಯಾರಿಸಲಿದ್ದಾರೆ.

ಮಹಿಳಾ ಸಬಲೀಕರಣದ ಭಾಗವಾಗಿ ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯಪಾಲ ರಾಮ್ ನಾಯ್ಕ್ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಈ ಸುಗಂಧ ದ್ರವ್ಯಕ್ಕೆ ‘ಬ್ರಜಗಂಧ’ ಎಂಬ ಹೆಸರಿನಲ್ಲಿ ಪೇಟೆಂಟ್ ಸಹ ಪಡೆಯಲಾಗಿದೆ. ಹಾಗೆಯೇ ಮೆಷಿನ್ ಖರೀದಿ ಹಾಗೂ ಇತರೆ ವೆಚ್ಚಗಳಿಗಾಗಿ 1.6 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಸುಗಂಧ ದ್ರವ್ಯ ತಯಾರಿಗಾಗಿ ದೇವಸ್ಥಾನ ಹಾಗೂ ಅಶ್ರಮದ ನಡುವೆ ಒಪ್ಪಂದ ಸಹ ಮಾಡಲಾಗಿದೆ. ಇದರಂತೆ ದೇವಾಲಯಗಳಲ್ಲಿ ಭಕ್ತರು ಅರ್ಪಿಸುವ ಹೂವುಗಳನ್ನು ಮಹಿಳಾ ಕಲ್ಯಾಣ ವಿಭಾಗದ ನೇತೃತ್ವದಲ್ಲಿ ವಿಧೆವೆಯರ ಆಶ್ರಮವನ್ನು ತಲುಪಲಿದೆ.

ಮಥುರಾ ಹಾಗೂ ವೃಂದಾವನ ಪ್ರದೇಶಗಳಲ್ಲಿ 500ರಷ್ಟು ಮಹಿಳೆಯರು ಇದೇ ಯೋಜನೆಯಡಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಸುಗಂಧ ದ್ರವ್ಯ ನಿರ್ಮಾಣಕ್ಕಾಗಿ ಸುಗಂಧ ಮತ್ತು ಸುವಾಸನೆ ಅಭಿವೃದ್ಧಿ ಕೇಂದ್ರ (FFDC) ತರಬೇತಿಯನ್ನು ನೀಡಲಿದೆ. ಇಲ್ಲಿ ಲಭಿಸುವ ಮೊತ್ತವನ್ನು ಮಹಿಳಾ ಕಲ್ಯಾಣ ಕಾರ್ಯಗಳಿಗಾಗಿ ವಹಿಸಲಾಗುವುದು.

Comments are closed.