ಮನೋರಂಜನೆ

ಆಸ್ತಿಯೆಲ್ಲಾ ಸಂಜಯ್ ದತ್ ಹೆಸರಿಗೆ ಬರೆದು ಮೃತಪಟ್ಟ ಅಭಿಮಾನಿ ! ಆಸ್ತಿಯನ್ನು ಸಂಜಯ್ ದತ್ ಮಾಡಿದ್ದೇನು..?

Pinterest LinkedIn Tumblr

ತಾವು ಆರಾಧಿಸುವ ತಾರೆಗಳಿಗಾಗಿ ಅಭಿಮಾನಿಗಳು ಏನು ಮಾಡಲು ಹಿಂಜರಿಯಲ್ಲ ಎಂಬುದಕ್ಕೆ ಈ ಘಟನೆಯೇ ನಿದರ್ಶನ. ಅಭಿಮಾನಿಯೊಬ್ಬರು ತಮಗಿಷ್ಟವಾದ ನಟನಿಗಾಗಿ ತನ್ನ ಆಸ್ತಿಯನ್ನೆಲ್ಲಾ ಉಯಿಲಿನಲ್ಲಿ ಬರೆದು ಇಹಲೋಹ ತ್ಯಜಿಸಿದ್ದಾರೆ. ಇಷ್ಟಕ್ಕೂ ಆ ಅಭಿಮಾನ ನಟ ಬೇರೆ ಯಾರೂ ಅಲ್ಲ ಸಂಜಯ್ ದತ್.

ಮುಂಬೈ ಮೂಲದ ನಿಷಿ ಹರಿಶ್ಚಂದ್ರ ತ್ರಿಪಾಠಿ (62) ಎಂಬುವವರು ಮೃತಪಡುವುದಕ್ಕೂ ಮುನ್ನವೇ ನಾಮಿನಿ ಹೆಸರಿನ ಜಾಗದಲ್ಲಿ ‘ಫಿಲಂ ಸ್ಟಾರ್ ಸಂಜಯ್ ದತ್’ ಎಂದು ಬರೆದಿದ್ದಾರೆ. ಸಂಜಯ್ ದತ್‌ರ ಪಾಲಿ ಹಿಲ್ ಹೋಮ್ ವಿಳಾಸ ನೀಡಿದ್ದಾರೆ. ತನಗೆ ಸೇರಿದ ಹಲವಾರು ಬೆಲೆಬಾಳುವ ವಸ್ತುಗಳೂ ಅವರಿಗೆ ಸೇರಬೇಕೆಂದು ಬ್ಯಾಂಕಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ನಿಷಿ ತ್ರಿಪಾಠಿ ಎಂಬ ಮಹಿಳೆಗೆ ಸಂಜಯ್ ದತ್ ಎಂದರೆ ಎಲ್ಲಿಲ್ಲದ ಅಭಿಮಾನ. ಜನವರಿ 29ರಂದು ಅನಾರೋಗ್ಯದಿಂದ ಅವರು ಕಣ್ಮುಚ್ಚಿದರು. ಆದರೆ ಅವರು ನಿಧನರಾಗುವುದಕ್ಕೂ ಕೆಲವು ತಿಂಗಳ ಹಿಂದೆಯೇ ತನ್ನ ಆಸ್ತಿಯನ್ನೆಲ್ಲಾ ಸಂಜಯ್ ದತ್ ಹೆಸರಿನಲ್ಲಿ ಉಯಿಲು ಬರೆದಿದ್ದರು.

ಜನವರಿ 29ರಂದು ಪೊಲೀಸರು ಸಂಜಯ್ ದತ್‌ಗೆ ಕರೆ ಮಾಡಿ, ‘ನಿಷಿ ಮೃತಪಡುವುದಕ್ಕೂ ಮುನ್ನ ತನ್ನ ಆಸ್ತಿಯನ್ನು ನಿಮ್ಮ ಹೆಸರಿನಲ್ಲಿ ಡಿಪಾಸಿಟ್ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ. ಅದನ್ನು ಕೇಳಿ ಶಾಕ್ ಸಂಜಯ್ ದತ್‌ಗೆ ಶಾಕ್ ಆಗಿದೆ. ಯಾಕೆಂದರೆ ಸಂಜಯ್ ದತ್‌ಗೆ ನಿಷಿ ಯಾರು ಎಂಬುದು ಗೊತ್ತಿರಲಿಲ್ಲ. ನಿಷಿ ಮನೆಗೆ ಬ್ಯಾಂಕ್ ಅಧಿಕಾರಿಗಳು ಬಂದು ತಿಳಿಸುವವರೆಗೂ ಕುಟುಂಬಿಕರಿಗೂ ಈ ಸಂಗತಿ ಗೊತ್ತಿರಲಿಲ್ಲವಂತೆ.

ಈ ಹುಚ್ಚ ಹಂಗಸಿಗೆ ಪರಲೋಕದಲ್ಲೂ ಶಾಂತಿ ಸಿಗದು . ಸಂಜಯ್ದತ್ ಮೆಲೀನ ಅಭಿಮಾನ ವಿಚಾರ ಬೇರೆ ಸಂಗತಿ. ಆದರೆ ಆ ಹುಚ್ಚಿನಲ್ಲಿ ತನ್ನ ಒಡ ಹುಟ್ಟಿದವರನ್ನೇ ಮರತುಬಿಟ್ಟಳಲ್ಲ! ಅವರಿಗೆ ಅವಳಮೇಲೆ ಅಭಿಮಾನ ಗೌರವ ಗಳು ಹೇಗೆ ಹುಟ್ಟ…+

ಮುಂದೆ ನಿಷಿ ಕುಟುಂಬಿಕರಿಂದ ಯಾವುದೇ ಸಮಸ್ಯೆ ಬರದಂತೆ ಇರಲು ಮುಂಜಾಗ್ರತೆಗಾಗಿ ಸಂಜಯ್ ದತ್ ತನ್ನ ವಕೀಲರ ಮೂಲಕ ಬ್ಯಾಂಕ್ ಆಫ್ ಬರೋಡಾಗೆ ಪತ್ರ ಬರೆಸಿದ್ದಾರೆ. ನಿಷಿ ತನ್ನ ಹೆಸರಿನಲ್ಲಿ ಡಿಪಾಸಿಟ್ ಮಾಡಿದ ಹಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜನವರಿ 15ರಂದು ತ್ರಿಪಾಠಿ ನಿಧನರಾದಾಗ ಅವರ ತಾಯಿ ಶಾಂತಿ (80), ಒಡಹುಟ್ಟಿದವರಾದ ಅರುಣ್, ಆಶಿಶ್ ಮತ್ತು ಮಧು ಜತೆಗೆ ವಾಸವಾಗಿದ್ದರು. ಮಲಬಾರ್ ಹಿಲ್‌ನ 3 ಬಿಎಚ್‌ಕೆ ತ್ರಿವೇಣಿ ಅಪಾರ್ಟ್‍ಮೆಂಟ್‌ನಲ್ಲಿ ವಾಸವಾಗಿದ್ದಾರೆ. 2,500 ಚದರ ಅಡಿ ವಿಸ್ತೀರ್ಣದ ಈ ಅಪಾರ್ಟ್‍ಮೆಂಟ್ ಬೆಲೆ ಸುಮಾರು ರೂ.10 ಕೋಟಿ ಎನ್ನಲಾಗಿದೆ. ಆದರೆ ತ್ರಿಪಾಠಿ ಬ್ಯಾಂಕ್ ಲಾಕರ್‌ನಲ್ಲಿ ಏನಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಕಾನೂನು ಕಟ್ಟಳೆಗಳ ಪ್ರಕಾರ ಅದನ್ನು ಓಪನ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಸಂಜಯ್ ದತ್, ‘ನಮ್ಮ ಮೇಲಿನ ಅಭಿಮಾನದಿಂದ ಕೆಲವು ಅಭಿಮಾನಿಗಳು ತಮ್ಮ ಮಕ್ಕಳಿಗೆ ನಮ್ಮ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ನಮ್ಮ ವಾಹನಗಳ ಬೆನ್ನತ್ತಿ ನಮಗೆ ಉಡುಗೊರೆ ಕೊಡಬೇಕೆಂದು ನೋಡುತ್ತಾರೆ. ಇವೆಲ್ಲಾ ನಮಗೆ ಅಭ್ಯಾಸವಾಗಿದೆ. ಆದರೆ ಈ ಸಂಗತಿ ಕೇಳಿದ ಬಳಿಕ ನನಗೆ ಶಾಕ್ ಆಯಿತು. ನಿಷಿ ಎಂಬುವವರು ಯಾರು ಎಂದು ನನಗೆ ಗೊತ್ತಿಲ್ಲ. ನಿಷಿ ನನ್ನ ಹೆಸರಿನಲ್ಲಿ ಬರೆದಿರುವ ಆಸ್ತಿ ಅವರ ಕುಟುಂಬಕ್ಕೆ ಸೇರಬೇಕಾದದ್ದು. ಇದಕ್ಕಾಗಿ ಕಾನೂನು ರೀತಿ ನನ್ನಿಂದೇನು ಆಗಬೇಕೋ ಅದನ್ನು ಮಾಡುತ್ತೇನೆ’ ಎಂದಿದ್ದಾರೆ ‘ಸಾಹೇಬ್ ಬೀಬಿ ಔರ್ ಗ್ಯಾಂಗ್‌ಸ್ಟರ್ 3’ ಚಿತ್ರೀಕರಣದಲ್ಲಿರುವ ಸಂಜಯ್ ದತ್.

ವಿಜಯ ಕರ್ನಾಟಕ ಸೋದರ ಪತ್ರಿಕೆ ಮುಂಬೈ ಮಿರರ್ ಪ್ರತಿನಿಧಿ ತ್ರಿಪಾಠಿ ಅವರ ಮನೆಗೆ ಭೇಟಿ ನೀಡಿದಾಗ ಈ ಬಗ್ಗೆ ಪ್ರತಿಕ್ರಿಯಿಸಲು ಅವರ ಕುಟುಂಬಿಕರು ನಿರಾಕರಿಸಿದ್ದಾರೆ. ಒಟ್ಟಾರೆ ಅಭಿಮಾನಿ ಬರೆದಿರುವ ಆಸ್ತಿಯನ್ನು ಸಂಜಯ್ ದತ್ ಸ್ವೀಕರಿಸಲ್ಲ ಎಂದಿದ್ದಾರೆ. ಅವರ ಕುಟುಂಬಿಕರಿಗೆ ಸೇರುವಂತೆ ಮಾಡಲು ಮುಂದಾಗಿದ್ದಾರೆ.

Comments are closed.