ಮನೋರಂಜನೆ

ಎಂಜಿಆರ್‌ ಮಾದರಿಯಲ್ಲಿ ನನಗೆ ನಟನೆಯೂ ಸಾಧ್ಯವಿಲ್ಲ, ಆಡಳಿತವೂ ಸಾಧ್ಯವಿಲ್ಲ: ರಜನಿಕಾಂತ್‌

Pinterest LinkedIn Tumblr


ಚೆನ್ನೈ: ನಟನೆ ಮತ್ತು ಆಡಳಿತದಲ್ಲಿ ಎಂಜಿ ರಾಮಚಂದ್ರನ್‌ ಎತ್ತಿದ ಕೈ. ಅವರ ಮಾದರಿಯಲ್ಲಿ ನನಗೆ ಎರಡೂ ಸಾಧ್ಯವಿಲ್ಲ. ನಟನೆಯೂ ಸಾಧ್ಯವಾಗಿಲ್ಲ. ಆಡಳಿತ ನೀಡಲೂ ಸಾಧ್ಯವಿಲ್ಲ ಎಂದು ರಾಜಕೀಯ ರಂಗದಲ್ಲೂ ಸೂಪರ್‌ ಸ್ಟಾರ್‌ ಆಗಲು ಹೊರಟಿಸಿರುವ ಚಿತ್ರ ನಟ ರಜನಿಕಾಂತ್‌ ತಿಳಿಸಿದ್ದಾರೆ.

ಚೆನ್ನೈನಲ್ಲಿ ಡಾ. ಎಂಜಿಆರ್‌ ಶಿಕ್ಷಣ ಸಂಸ್ಥೆಯಲ್ಲಿ ಎಂಜಿಆರ್‌ ಪ್ರತಿಮೆ ಅನಾವರಣಗೊಳಿಸಿ ರಜನಿಕಾಂತ್‌ ಭಾಷಣ ಮಾಡಿದರು.

ಎಂಜಿಆರ್‌ ಮಾದರಿಯಲ್ಲಿ ಸಾಗಬೇಕೆಂಬ ಮಹದಾಸೆಯೊಂದಿಗೆ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಅವರ ಹಾದಿಯಲ್ಲಿ ಯಶಸ್ವಿಯಾಗಿ ಸಾಗಿದರೆ ಅದೇ ನನ್ನ ಪುಣ್ಯ ಎಂದು ತಿಳಿಸಿದರು.

ಕರುಣಾನಿಧಿ, ಮೂಪನಾರ್‌, ಚೋ ರಾಮಸ್ವಾಮಿ ಅವರೊಂದಿಗಿನ ಒಡನಾಟದೊಂದಿಗೆ ರಾಜಕೀಯ ರಂಗದ ಹೂರಣವನ್ನು ಸ್ವಲ್ಪ ತಿಳಿದುಕೊಂಡಿದ್ದೇನೆ ಎಂದು ರಜನಿಕಾಂತ್‌ ಹೇಳಿದರು.

ಕಳೆದ ಬಾರಿ ರಾಜಕೀಯ ಕಾರಣಗಳಿಗಾಗಿ ನಾನು ಎಂಜಿಆರ್‌ ಪ್ರತಿಮೆ ಅನಾವರಣ ಮಾಡಲು ಆಗಲಿಲ್ಲ. ಆದರೆ ಈಗ ರಾಜಕೀಯ ರಂಗಕ್ಕೆ ಧುಮುಕಿಯೇ ಪ್ರತಿಮೆ ಅನಾವರಣ ಮಾಡುತ್ತಿದ್ದೇನೆ ಎಂದು ಸೂಪರ್‌ ಸ್ಟಾರ್ ಹೇಳಿದ ಕೂಡಲೇ ಕರತಾಡನ ಮುಗಿಲು ಮುಟ್ಟಿತು.

ರಾಜಕೀಯ ರಂಗದಲ್ಲಿ ನನಗೆ ಕೆಂಪು ಹಾಸು ಸಿಗುವುದಿಲ್ಲ ಎಂಬುದು ಗೊತ್ತು. ರಾಜಕೀಯ ಎಂಬುದು ಹಾವು ಏಣಿ ಆಟ ಇದ್ದಂತೆ. ಇದರಲ್ಲಿ ಜಯಿಸಬೇಕು. ನಾನು ರಾಜಕೀಯಕ್ಕೆ ಧುಮುಕಲು ಎಸಿ ಷಣ್ಮುಗಂ ಅವರು. ತಮಿಳುನಾಡಿನಲ್ಲಿ ಪ್ರಮುಖ ನಾಯಕರ ಕೊರತೆ ಇದೆ. ಅದನ್ನು ನೀಗಿಸಬೇಕು. ಈ ನಿಟ್ಟಿನಲ್ಲಿ ನಾನೂ ಹೆಜ್ಜೆ ಇಡುತ್ತೇನೆ ಎಂದು ರಜನಿಕಾಂತ್‌ ಘೋಷಿಸಿದರು.

Comments are closed.