ಮನೋರಂಜನೆ

ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾದ ಕೃತಿ

Pinterest LinkedIn Tumblr


ಸದ್ಯಕ್ಕೆ ಸ್ಯಾಂಡಲ್‌ವುಡ್‌ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ನಟಿ ಕೃತಿ ಕರಬಂಧ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಅವರ ಜೊತೆ ದಳಪತಿ ಚಿತ್ರದಲ್ಲಿ ಅಭಿನಯಿಸಿರುವ ಕೃತಿ ಕರಬಂಧ ಆ ಚಿತ್ರ ತೆರೆಗೆ ಬರೋಕು ಮುನ್ನವೇ ಮತ್ತೊಂದು ಹಿಂದಿ ಚಿತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಹೌದು, ನಟಿ ಕೃತಿ ಕರಬಂಧ ಅಭಿನಯಿಸಿರುವ ಹಿಂದಿಯ ಹೊಸಚಿತ್ರ ‘ವೀರೈ ಕಿ ವೆಡ್ಡಿಂಗ್’ ಸಿನಿಮಾ ಇದೇ ಮಾರ್ಚ್ ತೆರೆಗೆ ಬರಲು ತಯಾರಿ ನಡೆಸುತ್ತಿದೆ. ಈಗಾ ಗಲೇ ಅದ್ದೂರಿಯಾಗಿ ಪ್ರಮೋಷನ್ ಕೆಲಸಗಳನ್ನು ಆರಂಭಿಸಿರುವ ಚಿತ್ರ ತಂಡ ದೆಹಲಿ, ಮುಂಬೈ, ಪುಣೆ, ಹೈದರಾಬಾದ್ ಮೊದಲಾದ ನಗರಗಳಿಗೆ ಭೇಟಿ ಪ್ರೇಕ್ಷಕರೊಂದಿಗೆ ಸಂವಾದ ಮಾಡುತ್ತ, ಬಹಿರಂಗ ಪ್ರಚಾರ ಕಾರ್ಯ ಗಳನ್ನು ನಡೆಸುತ್ತಿದೆ. ಇದೇ ವಾರಾಂತ್ಯದಲ್ಲಿ ಚಿತ್ರದ ಪ್ರಮೋಷನ್‌ಗಾಗಿ ಬೆಂಗಳೂರಿಗೆ ಆಗಮಿಸಿರುವ ‘ವೀರೈ ಕಿ ವೆಡ್ಡಿಂಗ್’ ಚಿತ್ರ ತಂಡ, ಸಿಲಿಕಾನ್ ಸಿಟಿಯ ಸಿನಿ ಪ್ರಿಯರ ಜೊತೆ ಒಂದಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿರುವ ಕೃತಿ ಕರಬಂಧ ಟೀಮ್ ಸಿನಿಪ್ರಿಯರ ಜೊತೆ ಹೋಳಿ ಹಬ್ಬವನ್ನು ಸಲೆಬ್ರೇಟ್ ಮಾಡುತ್ತಿದೆ.

ಇನ್ನು ಹೋಳಿ ಹಬ್ಬದ ವೇಳೆಯಲ್ಲಿ ಬೆಂಗಳೂರಿಗೆ ಸಿನಿಮಾ ಟೀಮ್ ಜೊತೆ ಬಂದಿರುವುದರಿಂದ, ಫ್ಯಾಮಿಲಿ ಜೊತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ಜೊತೆಗೆ ಮನೆಯ ಊಟ ತಿನ್ನಲು ಆಗುತ್ತಿಲ್ಲ ಎಂಬ ಬೇಸರ ಕೂಡ ಕೃತಿಯನ್ನು ಕಾಡು ತ್ತಿದೆಯಂತೆ. ಅಶು ತ್ರಿಖಾ ಅವರ ನಿರ್ದೇಶನ ‘ವೀರೈ ಕಿ ವೆಡ್ಡಿಂಗ್’ ಸಿನಿಮಾದಲ್ಲಿ ನಟಿ ಕೃತಿ ಕರಬಂಧ ಅವರಿಗೆ ಪುಳಕಿತ್ ಸಾಮ್ರಾಟ್ ನಾಯಕನಾಗಿ ಜೋಡಿಯಾಗಿದ್ದಾರೆ. ಈಗಾಗಲೇ ‘ವೀರೈ ಕಿ ವೆಡ್ಡಿಂಗ್’ ಸಿನಿಮಾದ ಟೀಸರ್‌ಗಳು ಮತ್ತು ಹಾಡುಗಳು ಒಂದಷ್ಟು ನಿರೀಕ್ಷೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ಚಿತ್ರ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಬಾಲಿವುಡ್‌ನಲ್ಲಿ ಕೃತಿಗೆ ಈ ಸಿನಿಮಾ ಕೈ ಹಿಡಿಯುತ್ತದೆಯಾ ಎಂಬುದು ಶೀಘ್ರದಲ್ಲಿಯೆ ಗೊತ್ತಾಗಲಿದೆ.

Comments are closed.