ಪಣಜಿ : ಐದು ದಿನಗಳ ಹಿಂದೆ ನಿರ್ಜಲೀಕರಣ ಮತ್ತು ಲೋ ಬಿಪಿ ಕಾರಣಕ್ಕೆ ಗೋವೆಯ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ನಿನ್ನೆ ಗುರುವಾರ ಬಿಡುಗಡೆಗೊಂಡರು.
”ಮುಖ್ಯಮಂತ್ರಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಈಗಿನ್ನು ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ” ಎಂದು ಸಿಎಂ ಕಾರ್ಯಾಲಯದ ಅಧಿಕಾರಿಯೋರ್ವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಳೆದ ಫೆ.15ರಂದು ಪರ್ರೀಕರ್ ಅವರನ್ನು ಲಘು ಪ್ಯಾಂಕ್ರಿಯಾಟಿಟಿಸ್ ತೊಂದರೆಗಾಗಿ ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಫೆ.22ರಂದು ರಾಜ್ಯ ವಿಧಾನಸಭೆಯಲ್ಲಿ ಸಂಕ್ಷಿಪ್ತ ಬಜೆಟ್ ಮಂಡನೆಗಾಗಿ ಬಿಡುಗಡೆಗೊಂಡಿದ್ದರು.
ಆ ಬಳಿಕ ಕಳೆದ ಭಾನುವಾರ ಅವರು ಗೋವಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಾಗಿದ್ದರು.
-ಉದಯವಾಣಿ