ಮನೋರಂಜನೆ

ನಟಿ ಶ್ರೀದೇವಿ ಅಕಾಲಿಕ ನಿಧನದ ಬಗ್ಗೆ ಪ್ರಧಾನಿ ಮೋದಿ, ಸಚಿನ್ ಹೇಳಿದ್ದೇನು..?

Pinterest LinkedIn Tumblr

ನವದೆಹಲಿ: ಬಾಲಿವುಡ್‌ ನಟಿ ಶ್ರೀದೇವಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್‌ ತಾರೆ ಸಚಿನ್ ತೆಂಡೂಲ್ಕರ್, ನಟರಾದ ರಜನಿಕಾಂತ್‌, ಕಮಲ್‌ ಹಾಸನ್‌ ಸೇರಿದಂತೆ ಸಿನಿಮಾ ಕ್ಷೇತ್ರದ ಗಿದ್ಗಜರು ಹಾಗೂ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಭಿನಯದ ಮೂಲಕ ಎಲ್ಲರ ಮನಗೆದ್ದ ನಟಿಯ ನಿಧನದ ಸುದ್ದಿ ನೋವುಂಟು ಮಾಡಿದೆ ಎಂದು ಬಹುತೇಕ ಮಂದಿ ಹೇಳಿದ್ದಾರೆ.

‘ಪ್ರಸಿದ್ಧ ನಟಿ ಶ್ರೀದೇವಿ ಅವರ ಅಕಾಲಿಕ ಮರಣದಿಂದ ದುಃಖಿತನಾದೆ. ಅವರು ಚಲನಚಿತ್ರ ಉದ್ಯಮದ ಹಿರಿಯರು, ಅವರ ಸುದೀರ್ಘ ವೃತ್ತಿಜೀವನದಲ್ಲಿ ವೈವಿಧ್ಯಮಯ ಪಾತ್ರಗಳು ಮತ್ತು ಸ್ಮರಣೀಯ ಅಭಿನಯಗಳು ಇದ್ದವು. ದುಃಖದ ಈ ವೇಳೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ. ಅವರ ಆತ್ಮಕ್ಕೆ ಶಾಂತಿಯು ಲಭಿಸಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

‘ನನಗೆ ಹೇಳಲು ಯಾವುದೇ ಪದಗಳಿಲ್ಲ. ನಾವು ಅವರನ್ನು ನೋಡುತ್ತಾ ಬೆಳೆದಿದ್ದೇವೆ. ಅವರು ನಮ್ಮೊಂದಿಗಿಲ್ಲ ಎಂಬುದನ್ನು ಸಹಿಸಿಕೊಳ್ಳುವುದು ಕಷ್ಟ. ಅವರಿಗೆ ಹೃದಯಪೂರ್ವಕವಾಗಿ ಸಂತಾಪ ಸೂಚಿಸುವೆ. ಕುಟುಂಬಕ್ಕೆ ನನ್ನ ಸಾಂತ್ವನ ಹೇಳಲು ಬಯಸುವೆ’ ಎಂದು ಕ್ರಿಕೆಟ್‌ ತಾರೆ ಸಚಿನ್ ತೆಂಡೂಲ್ಕರ್‌ ಹೇಳಿದ್ದಾರೆ.

ಶ್ರೀದೇವಿ ಅವಯ ಅಕಾಲಿಕ ಮರಣದ ಸುದ್ದಿ ಕೇಳಿ ಆಘಾತತಂದಿತು. ಅವರು ಕಲೆಗೆ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುವ ಮೂಲಕ ಲಕ್ಷಾಂತರ ಜನರಿಗೆ ಸಂತೋಷದ ನಗುವನ್ನು ನೀಡಿದ ಬಹುಮುಖ ನಟಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಬಾಲಿವುಡ್​ನ ಹಿರಿಯ ನಟಿ, ಬಹುಭಾಷಾ ಅಭಿನೇತ್ರಿ ಶ್ರೀದೇವಿ ಅವರು ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

Comments are closed.