ಮನೋರಂಜನೆ

4ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಶ್ರೀದೇವಿ ಕನ್ನಡದ 6 ಚಿತ್ರಗಳಲ್ಲಿ ನಟನೆ

Pinterest LinkedIn Tumblr

ಮುಂಬಯಿ: ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಶ್ರೀದೇವಿ ವಿಧಿವಶರಾಗಿದ್ದಾರೆ. ದುಬೈನಲ್ಲಿ ನಿನ್ನೆ ರಾತ್ರಿ 11.30 ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿರುವ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ತರಲಾಗುವುದು.

1963ರ ಆಗಸ್ಟ್ 13 ರಂದು ತಮಿಳು ನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ ತಮ್ಮ 4ನೇ ವಯಸ್ಸಿನಲ್ಲಿ 1969 ರಲ್ಲಿ ಬಾಲನಟಿಯಾಗಿ ತಮಿಳಿನ ತುನೈವನ್ ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರ 1978ರಲ್ಲಿ ಸೊಲ್ವ ಸಾವನ್ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಶ್ರೀದೇವಿ ಸುಮಾರು 215 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಮಲಯಾಳಂ ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲೂ ಶ್ರೀದೇವಿ ನಟಿಸಿದ್ದರು. ಕನ್ನಡದ ಹೆಣ್ಣು ಸಂಸಾರದ ಕಣ್ಣು, ಭಕ್ತ ಕುಂಬಾರ. ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋದ ಕೃಷ್ಣ, ಹಾಗೂ ಪ್ರಿಯಾ ಸಿನಿಮಾಗಳಲ್ಲಿ ನಟಿಸಿದ್ದರು.

ಇನ್ನು ಶ್ರೀದೇವಿ ಅವರಿಗೆ 2013 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಪರಸ್ಕರಿಸಲಾಗಿತ್ತು. 5 ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದ ಶ್ರೀದೇವಿ ಅವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದವು.

ಜುಡಾಯಿ ನಂತರ 15 ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಶ್ರೀದೇವಿ ಇಂಗ್ಲೀಷ್ -ವಿಂಗ್ಲಿಷ್ ಸಿನಿಮಾ ಮೂಲಕ 2012 ರಲ್ಲಿ ಬಾಲಿವುಡ್ ಗೆ ವಾಪಸ್ ಬಂದಿದ್ದರು, ನವಾಜುದ್ದೀನ್ ಸಿದ್ಧಿಕಿ ಜೊತೆ ಮಾಮ್ ಸಿನಿಮಾದಲ್ಲಿ ನಟಿಸಿದ್ದರು. ಶಾರೂಕ್ ಖಾನ್ ಮುಂದಿನ ಸಿನಿಮಾ ಝೀರೋ ದಲ್ಲೂ ಕೂಡ ವಿಶೇಷ ಪಾತ್ರದಲ್ಲಿ ಶ್ರೀದೇವಿ ನಟಿಸಿದ್ದರು.

Comments are closed.