ಮನೋರಂಜನೆ

ನಟಿ ಶ್ರೀದೇವಿ ಸಾವಿನ ಕೊನೆಯಾಗಳಿಗೆಯ ವೀಡಿಯೊ ಒಮ್ಮೆ ನೋಡಿ…

Pinterest LinkedIn Tumblr

ದುಬೈ: ಬಾಲಿವುಡ್​ನ ಹಿರಿಯ ನಟಿ ಶ್ರೀದೇವಿ ಅವರು ದುಬೈಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಾವಿಗೂ ಕೆಲವೇ ಕ್ಷಣಗಳ ಮುನ್ನ ವಿವಾಹದಲ್ಲಿ ಪಾಲ್ಗೊಂಡ ಶ್ರೀದೇವಿಯನ್ನೊಮ್ಮೆ ನೋಡಿ…

ಬಹುಭಾಷಾ ನಟಿ ಶ್ರೀದೇವಿ ಶನಿವಾರ ಸಂಜೆ ಅವರ ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಪತಿ ಬೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜತೆ ದುಬೈಗೆ ಬಂದಿದ್ದರು.

ಶ್ರೀದೇವಿ ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಅಭಿನಯ ಮಾಡಿದ್ದರು. ನಾಲ್ಕು ದಶಕಗಳವರೆಗೆ ಸಿನಿಮಾ ವೃತ್ತಿಜೀವನದಲ್ಲಿ ಬದುಕು ಸವೆಸಿದ್ದಾರೆ.

ಶ್ರೀದೇವಿ ಅವರು ಅಭಿನಯಿಸಿದ ಚಾಂದನಿ, ಮಿ.ಇಂಡಿಯಾ, ಮಾವಲಿ ಮತ್ತು ತೋಫಾ ಸೇರಿದಂತೆ ಹಲವು ಚಿತ್ರಗಳು ಯಶಸ್ಸು ಕಂಡು ಚಿತ್ರರಂಗದಲ್ಲಿ ಸುದ್ದು ಮಾಡಿದ್ದವು.

ಚಿತ್ರೋದ್ಯಮಕ್ಕೆ ಸಲ್ಲಿಸಿದ ಸೇವೆಗೆ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಪದ್ಮ ಶ್ರೀ’ಯನ್ನು 2013ರಲ್ಲಿ ನೀಡಿ ಗೌರವಿಸಲಾಗಿತ್ತು

Comments are closed.