ಮನೋರಂಜನೆ

ಇಂಟರ್​ನೆಟ್​ ಸೆನ್ಸೇಷನ್​ ಪ್ರಿಯಾಗೆ ಬಾಲಿವುಡ್​ನಿಂದಲೂ ಆಫರ್​ಗಳು ಬರುತ್ತಿವೆಯಂತೆ..!

Pinterest LinkedIn Tumblr


ಮುಂಬೈ: ತನ್ನ ಒಂದು ಕಣ್ಣೋಟದಿಂದಲೇ ರಾತ್ರೋರಾತ್ರಿ ಇಂಟರ್​ನೆಟ್​ನಲ್ಲಿ ಸ್ಟಾರ್​ ಆದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ಗೆ ಬಾಲಿವುಡ್​ನಿಂದ ಅವಕಾಶಗಳ ಸುರಿಮಳೆಯಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಬಾಲಿವುಡ್​ ಅಂಗಳಕ್ಕೆ ಈ ಚೆಲುವು ಕಾಲಿಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಪ್ರಿಯಾ ನ್ಯಾಷನಲ್​ ಕ್ರಷ್​ ಆಗಿ ಬದಲಾಗುತ್ತಿದ್ದಂತೆ ಬಾಲಿವುಡ್​ನ ಕೆಲವು ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಆಕೆಯನ್ನು ಸಂಪರ್ಕಿಸಿದ್ದಾರೆ. ಇನ್ನು ಕೆಲವರು ಪ್ರಿಯಾಗೆ ಒಂದು ಚಾನ್ಸ್​ ನೀಡಲು ಯೋಚಿಸುತ್ತಿದ್ದಾರೆ ಎಂದು ಬಾಲಿವುಡ್​ ಅಂಗಳದಿಂದ ಸುದ್ದಿ ಬಂದಿದೆ.

ಪ್ರಿಯಾ ಇಂಟರ್​ನೆಟ್​ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಎಲ್ಲರೂ ಆಕೆಗೆ ತಮ್ಮ ಚಿತ್ರದಲ್ಲಿ ಚಾನ್ಸ್​ ನೀಡಲು ಬಯಸುತ್ತಿದ್ದಾರೆ. ಜತೆಗೆ ಪ್ರಿಯಾ ಹಿಂದಿಯನ್ನು ಚೆನ್ನಾಗಿ ಮಾತನಾಡುತ್ತಾರೆ. ಹಾಗಾಗಿ ಕೆಲವರು ಪ್ರಿಯಾ ಜತೆಗೆ ಈಗಾಗಲೇ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಒರು ಅಡಾರ್​ ಲವ್​’ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ..’ ಹಾಡಿನ ಮೂಲಕ ಪ್ರಿಯಾ ದೇಶದ ಯುವಕರ ಮನಗೆದ್ದಿದ್ದಾರೆ. ಜತೆಗೆ ಕೆಲವೇ ದಿನಗಳಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಈಕೆಯ ಫಾಲೋವರ್​ಗಳ ಸಂಖ್ಯೆ 29 ಲಕ್ಷಕ್ಕೆ ಏರಿಕೆಯಾಗಿದೆ.

Comments are closed.