ಮನೋರಂಜನೆ

ಮದುವೆಗೂ, ಅಭಿನಯಕ್ಕೂ ಸಂಬಂಧವಿಲ್ಲ…

Pinterest LinkedIn Tumblr


ಮದುವೆಯಾದ ನಂತರ ಸಾಮಾನ್ಯವಾಗಿ ನಾಯಕ ನಟಿಯರಿಗೆ ಬೇಡಿಕೆ ಕಡಿಮೆ ಯಾಗುತ್ತೆ ಅನ್ನೋದು ಚಿತ್ರರಂಗದಲ್ಲಿ ಕೇಳಿ ಬರುವ ಮಾತು. ಆದರೆ, ಇಲ್ಲೊಬ್ಬ ನಟಿ ಮದುವೆಯ ಬಳಿಕವೂ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿ ಸೋಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಆ ನಟಿಯ ಹೆಸರು ಭಾವನಾ…, ಜಾಕಿ ಭಾವನಾ.

ಜಾಕಿ ಚಿತ್ರದ ಮೂಲಕ ಭಾವನಾ ಎಂದೇ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯ ರಾಗಿರುವ ಭಾವನಾ ಇತ್ತೀಚೆಗಷ್ಟೆ ಕನ್ನಡದ ನಿರ್ಮಾ ಪಕ ನವೀನ್ ಕುಮಾರ್ ಅವರೊಂದಿಗೆ ವಿವಾಹವಾಗಿದ್ದರು. ಮದುವೆಗೂ ಮುನ್ನ ಜಾಕಿ ಭಾವನಾ ಅಭಿನಯಿಸಿದ್ದ ಟಗರು ಚಿತ್ರ ಮುಂದಿನವಾರ ತೆರೆಗೆ ಬರುತ್ತಿದೆ. ಅದಾದ ಬಳಿಕ ಜಾಕಿ ಭಾವನಾ ಮತ್ತೆ ಬಣ್ಣ ಹಚ್ಚುತ್ತಾರಾ..? ಮತ್ತೆ ಸಿನಿಮಾಗಳಲ್ಲಿ ಆ್ಯಕ್ಟಿಂಗ್ ಮಾಡುತ್ತಾರಾ ಎಂಬ ಪ್ರಶ್ನೆಗಳಿಗೆ ಭಾವನಾ ಉತ್ತರಿಸಿದ್ದಾರೆ.

ಇನ್ನು ಭಾವನಾ ಪತಿ ನವೀನ್‌ಗೆ ಸಿನಿಮಾ ರಂಗದ ನಂಟಿರುವುದರಿಂದ, ಅವರು ಅಭಿನಯಕ್ಕೆ ಹೆಚ್ಚು ಪ್ರೋತ್ಸಾಹ ನೀಡು ತ್ತಿದ್ದಾರಂತೆ. ನಟನೆ ಮುಂದುವರಿಸಲು ಕುಟುಂಬದವರು ಕೂಡ ಸಾಥ್ ಕೊಡುತ್ತಿದ್ದಾರಂತೆ. ಕಳೆದ 15 ವರ್ಷಗಳಿಂದ 4 ಭಾಷೆ ಗಳಲ್ಲಿ ಸುಮಾರು 80 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ.. ಹೀಗಿರುವಾಗ ಮದುವೆಯಾಗಿದ್ದೇನೆ ಎಂಬ ಒಂದೇ ಕಾರಣಕ್ಕೆ ನಾನು ಇದ್ದಕ್ಕಿದ್ದಂತೆ ಏಕೆ ಸಿನಿಮಾ ಬಿಡಬೇಕು? ಎಂದು ಪ್ರಶ್ನಿಸುತ್ತಾರೆ.

ಮೊದಲಿನಿಂದಲೂ ಒಂದರ ಹಿಂದೊಂದು ಸಿನಿಮಾ ಮಾಡುವ ಪ್ರವೃತ್ತಿ ನನ ಗಿಲ್ಲ. ಪ್ರತಿ ಸಿನಿಮಾಗೂ ಸ್ವಲ್ಪ ಗ್ಯಾಪ್ ತೆಗೆದು ಕೊಳ್ಳುತ್ತೇನೆ. ನನಗೆ ಆಫರ್ಸ್ ಬಂದಾಗ ನಾನು ನವೀನ್ ಇಬ್ಬರೂ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆ. ಇತ್ತೀಚೆಗೆ ಇನ್‌ಸ್ಪೆಕ್ಟರ್ ವಿಕ್ರಮ್ ಸಿನಿಮಾದ ಕಥೆಯನ್ನು ಕೇಳಿದ್ದೆವು. ನಮ್ಮಿಬ್ಬರಿಗೂ ಚಿತ್ರದ ಕಥೆ ಮತ್ತು ಪಾತ್ರ ಇಷ್ಟವಾಯಿತು. ಹಾಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿದೆ. ಉತ್ತಕ ಕಥೆಗಳಿರುವ ಚಿತ್ರಕ್ಕೆ ಅವಕಾಶ ಬಂದರೇ ಖಂಡಿತ ನಾನು ಮಿಸ್ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ಭಾವನಾ.

ಚಿಕ್ಕಂದಿನಿಂದಲೂ ನನಗೆ ನಟಿಯಾಗಬೇಕೆಂಬ ಆಸೆಯಿತ್ತು. ಅದನ್ನು ನನ್ನ ಪೋಷಕರ ಮುಂದೆ ಹೇಳುತ್ತಿದ್ದೆ, ಆ ಆಸೆಯೆ ಚಿತ್ರರಂಗಕ್ಕೆ ಬರಲು ಕಾರಣವಾಯಿತು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ಮತ್ತು ಅಭಿನಯವನ್ನು ಪ್ರೀತಿಸಲು ಕಲಿತೆ. ಅದೇ ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಮೊದಲನೇ ಸಿನಿಮಾ ಮಾಡಿದಾಗ ನನಗೆ 15 ವರ್ಷ ವಯಸ್ಸು. ಆಗ ತಾನೇ ಸ್ಕೂಲ್ ಮುಗಿಸಿದ್ದೆ. ನನಗೆ ಹಲವು ಕನಸಿನ ಪಾತ್ರಗಳನ್ನು ಮಾಡಬೇಕೆಂಬ ಬಯಕೆಯಿದೆ. ಹಾಗಾಗಿ ಆ್ಯಕ್ಟಿಂಗ್ ಬಿಡುವ ಯಾವುದೇ ಯೋಚನೆ ನನ್ನ ಮುಂದಿಲ್ಲ’ ಎನ್ನುತ್ತಾರೆ ಭಾವನಾ.

ಕನ್ನಡದಲ್ಲಿ ಪುನೀತ್ ರಾಜಕುಮಾರ್, ಸುದೀಪ್, ಗಣೇಶ್ ಮೊದಲಾದ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಭಾವನಾ ಇದೀಗ ಟಗರು ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ನಟಿಸಿದ್ದಾರೆ. ಸಿನಿಮಾದಲ್ಲಿ ಭಾವನಾ ದಂತವೈದ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇನೆಯಿರಲಿ…, ಜಾಕಿ ಭಾವನಾ ಅವರ ಈ ಮತು ಕೇಳಿ ಅವರ ಫ್ಯಾನ್ಸ್ ಗಳಂತೂ ಫುಲ್ ಖುಷ್ ಆಗಿದ್ದಾರೆ. ಮದುವೆಯಾದ ಬಳಿಕವೂ ಭಾವನಾ ತಮ್ಮ ಬೇಡಿಯನ್ನು ಹಾಗೇ ಉಳಿಸಿಕೊಂಡು ಹೋಗು ತ್ತಾರಾ.., ಎಂಬುದನ್ನು ಕಾದು ನೋಡಬೇಕು.

Comments are closed.