ಚಿತ್ರರಂಗದಲ್ಲಿ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸುವುದರ ವಿರುದ್ಧ ದೊಡ್ಡ ಕೂಗೇ ಕೇಳಿ ಬರುತ್ತಿದೆ. ಬಾಲಿವುಡ್, ಸ್ಯಾಂಡಲ್‌ವುಡ್ ಎನ್ನದೆ ಎಲ್ಲ ಕಡೆಯಿಂದ ಈ ಕೂಗು ಕೇಳಿ ಬರುತ್ತದೆ.
ಇತ್ತೀಚೆಗೆ ಶ್ರುತಿ ಹರಿಹರನ್ ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಓಪನ್ ಆಗಿ ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಶ್ರುತಿ ಹರಿಹರನ್ ಹೇಳಿಕೆಗೆ ಇತರ ನಟಿಯರೂ ಬೆಂಬಲ ಸೂಚಿಸಿದ್ದರು.
ಇದೀಗ ಸೋನಂ ಕಪೂರ್ ಚಿತ್ರರಂಗದಲ್ಲಿರುವ ಲೈಂಗಿಕ ಶೋಷಣೆ ಬಗ್ಗೆ ಹೇಳಿದ್ದಾರೆ. ಬರೀ ಬಾಲಿವುಡ್ ಮಾತ್ರವಲ್ಲ ವಿಶ್ವದ ಎಲ್ಲ ಕಡೆ ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ನೀಡುವವರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ನಮ್ಮ ಧ್ವನಿಯನ್ನು ಕೇಳಿ, ನಮಗೆ ಬೆಂಬಲ ಸೂಚಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.