ಮನೋರಂಜನೆ

ಬಿಗ್‌ಬಾಸ್’ನಲ್ಲಿ ಅರ್ಹತೆ ಇಲ್ಲದ ನಿವೇದಿತಾ ವಿನ್ ಆಗಬಾರದು ! ಸುದೀಪ್ ಮುಂದೆ ಹೇಳಿದ ‘ಅಕ್ಕ’

Pinterest LinkedIn Tumblr

ಬೆಂಗಳೂರು: ಬಿಗ್‌ಬಾಸ್’ನಲ್ಲಿ ಸಣ್ಣ ಮಗುವಿನಂತೆ ನಟನೆ ಮಾಡುತ್ತಿರುವ ಡಾಲ್ ನಿವೇದಿತಾ ಗೌಡ ವಿನ್ ಆಗಬಾರದು.

ಈ ಮಾತು ಹೇಳಿದ್ದು 99 ದಿನಗಳವರೆಗೆ ಬಿಗ್‌ಬಾಸ್ ಮನೆಯಲ್ಲಿದ್ದು ಶನಿವಾರ ಹೊರಬಂದಿರುವ ಅನುಪಮಾ ಗೌಡ.

ನಿವೇದಿತಾ ಗೌಡಗೆ ಬಿಗ್ ಬಾಸ್ ಮನೆಯಲ್ಲಿರುವ ಅರ್ಹತೆ ಇಲ್ಲ. ಟಾಸ್ಕಿನಲ್ಲಿ ಯಾವುದೇ ರೀತಿಯ ಇಂಟರೆಸ್ಟ್ ತೋರಿಸಲ್ಲ. ಯಾವುದೇ ರೀತಿಯಿಂದಲೂ ನಿವೇದಿತಾ ಬಿಗ್ ಮನೆಯಲ್ಲಿರಲು ಅರ್ಹಳಲ್ಲ ಎಂದು ಅನುಪಮಾ ಗೌಡ ತಮ್ಮ ಮನಸಿನೊಳಗೆ ನಿವೇದಿತಾ ಮೇಲಿದ್ದ ಸಿಟ್ಟನ್ನು ಹೊರಹಾಕಿದರು.

ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಅನುಪಮಾ ಗೌಡ ಅವರು ರವಿವಾರ ನಡೆದ ಸೂಪರ್ ಸಂಡೆ ವಿಥ್ ಕಿಚ್ಚ ಸುದೀಪ ಎಪಿಸೋಡಿನಲ್ಲಿ ಹಾಜರಾಗಿದ್ದರು.

ಸುಮಾರು 99 ದಿನಗಳವರೆಗೆ ಬಿಗ್‌ ಮನೆಯಲ್ಲಿ ಅನುಪಮಾ ಅವರ ಜರ್ನಿ ಹೇಗಿತ್ತು ಹಾಗೂ ಅವರು ಹೊರಗೆ ಬರಲು ಕಾರಣ ಸೇರಿದಂತೆ ಹಲವು ವಿಚಾರಗಳ ಕುರಿತು ಸುದೀಪ್ ಚರ್ಚೆ ನಡೆಸಿದ್ರು. ಸುದೀಪ್‌ ಅವರು ಸದ್ಯ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಕುರಿತು ಅನುಪಮಾ ಅವರಿಂದ ಅಭಿಪ್ರಾಯಗಳನ್ನು ಪಡೆದುಕೊಂಡ್ರು. ಬಳಿಕ ಈ ಬಾರಿ ಬಿಗ್‌ಬಾಸ್ ವಿನ್ ಯಾರಾಗಬಹುದು? ಯಾರಾಗಬೇಕು ಎಂಬುದನ್ನು ಹೇಳಿದರು ಅನುಪಮಾ.

ಅನುಪಮಾ ಹೇಳುವಂತೆ ಚಂದನ್ ಶೆಟ್ಟಿ ಬಿಗ್‌ಬಾಸ್ ವಿನ್ ಆಗಬಹುದಂತೆ. ಆದರೆ, ಅವರಿಗೆ ಜೆಕೆ ವಿನ್ ಆಗಬೇಕಂತೆ. ಬಿಗ್‌ಬಾಸ್ ಮನೆಯಲ್ಲಿ ದಿವಾಕರ್ ನಾಟಕ ಮಾಡುತ್ತಾರಂತೆ. ಚಂದನ್ ಯಲ್ಲವನ್ನು ಅಳೆದು ತೂಗಿ ಆಡುತ್ತಾರಂತೆ. ಸಮೀರ್ ಸುಳ್ಳು ಹೇಳುತ್ತಾರಂತೆ.

Comments are closed.