ರಾಷ್ಟ್ರೀಯ

ಪದ್ಮಾವತ್​’ನಲ್ಲಿ ದೀಪಿಕಾ ಪಡುಕೋನೆ ಸೊಂಟಕ್ಕೆ ಬಟ್ಟೆ ಸುತ್ತಿದ ಸೆನ್ಸಾರ್​ ಮಂಡಳಿ!

Pinterest LinkedIn Tumblr

ಹೊಸದಿಲ್ಲಿ: ವಿರೋಧದ ನಡುವೆಯೂ ಮುಂದಿನ ವಾರ ತೆರೆಗೆ ಅಪ್ಪಳಿಸಲಿರುವ ಸಂಜಯ್​ ಬನ್ಸಾಲಿ ನಿರ್ದೇಶನದ ವಿವಾದಿತ ಚಿತ್ರ ‘ಪದ್ಮಾವತ್​’ನ ಹಾಡೊಂದನ್ನು ಸೆನ್ಸಾರ್​ ಮಂಡಳಿಯ ಆದೇಶದಂತೆ ಬದಲಾವಣೆ ಮಾಡಲಾಗಿದೆ.

ನಟಿ ದೀಪಿಕಾ ಪಡುಕೋಣೆ ಸೊಂಟ ಬಳುಕಿಸಿರುವ ‘ಘೂಮರ್‌’ ಹಾಡಿನಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ದೀಪಿಕಾರ ಸೊಂಟ ಹಾಗೂ ಹೊಟ್ಟೆಯನ್ನು ಕಂಪ್ಯೂಟರ್​ ತಂತ್ರಾಂಶ ಆಧರಿಸಿ ಮುಚ್ಚಲಾಗಿದೆ. ಈ ಹೊಸ ವರ್ಸನ್‌ ವಿಡಿಯೋವನ್ನು ಅಂತರ್ಜಾಲದಲ್ಲಿ ಹರಿ ಬಿಡಲಾಗಿದ್ದು, ಭಾರಿ ವೈರಲ್​ ಆಗಿದೆ.

ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಲಿದೆ ಎಂಬ ಕಾರಣಕ್ಕಾಗಿ ಬದಲಾವಣೆ ಮಾಡಲಾಗಿದೆ. ಪ್ರಾರಂಭದಿಂದಲೂ ರಾಜಪುತ್‌ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಕರಣಿ ಸೇನೆ ಆರೋಪಿಸಿ, ಬಿಡುಗಡೆಗೆ ವಿರೋಧ ವ್ಯಕ್ತವಾಗಿತ್ತು.

ಎಲ್ಲೆಡೆ ವಿರೋಧ ವ್ಯಕ್ತವಾದ್ದರಿಂದ ‘ಪದ್ಮಾವತಿ’ ಎಂದಿದ್ದ ಚಿತ್ರದ ಹೆಸರನ್ನು ‘ಪದ್ಮಾವತ್’ ಎಂದು ಬದಲಿಸಲಾಯಿತು. ಈ ಮಧ್ಯೆ ಸೆನ್ಸಾರ್‌‌ ಬೋರ್ಡ್‌ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ನೀಡಿದ್ದರಿಂದಲೂ ವಿರೋಧ ವ್ಯಕ್ತವಾಗಿತ್ತು.

ಸುಪ್ರೀಂಕೋರ್ಟ್‌ ‘ಪದ್ಮಾವತ್’ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದು, ಚಿತ್ರ ಪ್ರದರ್ಶನಕ್ಕೆ ಅಡ್ಡಿಯಾಗದಂತೆ ಸರ್ಕಾರಗಳು ನೋಡಿಕೊಳ್ಳಬೇಕೆಂದು ಆದೇಶಿಸಿದೆ.

Comments are closed.