
ಬೆಂಗಳೂರು: 13 ನೇ ವಾರವನ್ನು ಪೂರೈಸಿ 14 ನೇ ವಾರಕ್ಕೆ ಕಾಲಿಟ್ಟ ಬಿಗ್‌ಬಾಸ್ ಮನೆಯಿಂದ ಶನಿವಾರ ಪ್ರಬಲ ಸ್ಪರ್ಧಿ ಎಂದೇ ಬಿಂಬಿತವಾಗಿದ್ದ ರಿಯಾಜ್ ಔಟ್ ಆಗಿದ್ದು, ಅವರನ್ನು ಮನೆಯಿಂದ ಹೊರಕಳುಹಿಸಿರುವ ಬಿಗ್‌ಬಾಸ್ ವಿರುದ್ಧ ರಿಯಾಜ್ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂದಿನಂತೆ ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಎಪಿಸೋಡಿಯನಲ್ಲಿ ಎಲಿಮಿನೇಟ್ ಪ್ರಕ್ರಿಯೆ ನಡೆಯಿತು. ಮನೆಯವರ ಯೋಗಕ್ಷೇಮ ವಿಚಾರಿಸಿಕೊಂಡ ಸುದೀಪ್, ನೇರವಾಗಿ ಎಲಿಮಿನೇಟ್ ಕೆಲಸವನ್ನು ಕೈಗೆತ್ತಿಕೊಂಡರು.
ಈ ವೇಳೆ ಈ ವಾರಕ್ಕೆ ಮನೆಯಿಂದ ಹೊರ ಹೋಗಲು ನಿವೇದಿತಾ ಗೌಡ, ಶೃತಿ, ಜೆಕೆ, ಚಂದನ್ , ರಿಯಾಜ್ ಹಾಗೂ ಸಮೀರ್ ಆಚಾರ್ಯ ಅವರು ನಾಮಿನೇಟ್ ಆಗಿದ್ದರು. ಮೊದಲಿಗೆ ನಿವೇದಿತಾ ಅವರನ್ನು ಸೇಫ್ ಮಾಡಿದ ಸುದೀಪ್ ಅವರು, ಬಳಿಕ ಚಂದನ್, ಜೆಕೆ , ಶೃತಿ ಅವರನ್ನು ಸೇಫ್ ಮಾಡಿದರು. ಕೊನೆಯದಾಗಿ ಸಮೀರ್ ಹಾಗೂ ರಿಯಾಜ್ ಉಳಿದುಕೊಂಡರು. ಈ ಇಬ್ಬರಲ್ಲಿ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮನೆಯ ಸದಸ್ಯರಲ್ಲಿ ಕಾಣಿಸಿಕೊಂಡಿತ್ತು. ಕೊನೆಯದಾಗಿ ರಿಯಾಜ್ ಔಟ್ ಆದರು.
ರಿಯಾಜ್ ಅವರನ್ನು ಬಿಗ್‌ಬಾಸ್’ನಿಂದ ಹೊರಗೆ ಕಳುಹಿಸಿದಕ್ಕೆ ಅವರ ಅಭಿಮಾನಿಗಳು ಬಿಗ್‌ಬಾಸ್’ನ ಅಧಿಕೃತ ಪೇಜಿನಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಸುದೀಪ್ ಅವರ ವಿರುದ್ಧವೂ ಕೆಂಡಾಮಂಡಲವಾಗಿದ್ದಾರೆ.
“ಬಿಗ್‌ಬಾಸ್ ಮನೆಯಲ್ಲಿ ಆರಂಭದಿಂದಲೂ ಸುದೀಪ್ ಅವರು ರಿಯಾಜ್ ವಿರುದ್ಧ ಸಣ್ಣಪುಟ್ಟ ವಿಷಯಕ್ಕೂ ಟಾರ್ಗೆಟ್ ಮಾಡುತ್ತಾ ಬಂದಿದ್ದು, ವಿನಾ ಕಾರಣ ಅವರ ಸಣ್ಣಪುಟ್ಟ ತಪ್ಪುಗಳ ಬಗ್ಗೆ ವಾರದ ಕಥೆ ಕಿಚ್ಚನ ಜತೆ ಎಪಿಸೋಡಿಯನಲ್ಲಿ ಎತ್ತಿ ತೋರಿಸುತ್ತಿದ್ದರು. ಮನೆಯಲ್ಲಿ ಬೇರೆ ಯಾರು ಏನೆ ದೊಡ್ಡ ತಪ್ಪು ಮಾಡಿದರೂ ಅದನ್ನು ಪ್ರಸ್ತಾಪಿಸದ ಸುದೀಪ್ ಕೇವಲ ರಿಯಾಜ್ ಅವ್ರನ್ನೆ ವಿಲನ್ ಮಾಡಿ ತೋಯಿಸುತ್ತಿದ್ದರು. ಜೆಕೆ, ಚಂದನ್, ದಿವಾಕರ್, ಅನುಪಮಾ, ಶ್ರುತಿ, ನಿವೇದಿತಾ ಗೌಡರ ತಪ್ಪುಗಳ ಬಗ್ಗೆ, ಅವರು ಬೇರೆಯವರಿಗೆ ನೋವುಂಟು ಮಾಡುವ ರೀತಿಯ ಹೇಳಿಕೆ ಬಗ್ಗೆ ಸುದೀಪ್ ಮಾತಾಡದೆ ಬೇಕೆಂದೇ ರಿಯಾಜ್’ರನ್ನು ವಿಲನ್’ತರ ಬಿಗ್ ಬಾಸ್ ಮನೆಯಿಂದ ಹೊರ ಹಾಕಿರುವುದು ತಪ್ಪು ” ಎಂದು ರಿಯಾಜ್ ಅಭಿಮಾನಿಗಳು ಕಲರ್ಸ್ ಸೂಪರ್ ಪೇಜಿನಲ್ಲಿ ತಮ್ಮ ಆಕ್ರೋಶವನ್ನು ಬಹಿರಂಗಪಡಿಸಿದ್ದಾರೆ.
ಇನ್ನೂ ಕೆಲವರು “ಈ ಕಾರ್ಯಕ್ರಮ ನಕಲಿಯಾಗಿದ್ದು, ಯಾರನ್ನು ವಿನ್ ಮಾಡಬೇಕು ಎಂದು ಮೊದಲೇ ನಿರ್ಧರಿಸಿರುತ್ತಾರೆ. ಪ್ರಬಲ ಸ್ಪರ್ಧಿಗಳನ್ನು ಔಟ್ ಮಾಡುವಾಗ ಇದು ಸ್ಪಷ್ಟ ಆಗುತ್ತಿದೆ. ರಿಯಾಜ್ ನೇರ-ನಡೆ ನುಡಿಯ ವ್ಯಕ್ತಿ. ಅಂಥವರನ್ನು ಔಟ್ ಮಾಡಿರುವುದು ಯಾರು ಊಹಿಸಲು ಸಾಧ್ಯವಿಲ್ಲ. ಬಿಗ್ ಬಾಸ್ ಮನೆಯಲ್ಲಿ ವಿನ್ ಆಗುವಂಥ ಸ್ಪರ್ಧಿಯಾಗಿರುವ ರಿಯಾಜ್ ಅವರನ್ನು ಬೇಕೆಂದೇ ಹೊರ ಕಳುಹಿಸಲಾಗಿದೆ” ಎಂದು ಬಿಗ್ ಬಾಸ್ ಆಯೋಜಕರು ಹಾಗು ಸುದೀಪ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ರಿಯಾಜ್ ದೊಡ್ಡ ಕನಸಿನೊಂದಿಗೆ ಬಿಗ್‌ಬಾಸ್ ಮನೆಗೆ ಬಂದಿದ್ದರು. ಬಿಗ್‌ಬಾಸ್ ವಿನ್ ಆಗಿ ಅದರ ಹಣದಿಂದ ಸುಂದರವಾದ ಮನೆ ಕಟ್ಟಬೇಕೆಂದು ಅಸೆ ಪಟ್ಟಿದ್ದರು. ಅದಕ್ಕಾಗಿ ತುಂಬಾ ಕಷ್ಟಪಟ್ಟು ಆಟ ಆಡುತ್ತಿದ್ದರು ಕೂಡ. ಆದರೆ, ಅವರ ಕನಸಿಗೆ ಬ್ರೇಕ್ ಬಿದ್ದಿತು. ಬಿಗ್‌ಬಾಸ್ ಗೆಲುವಿಗೆ ಇನ್ನೆರಡು ವಾರಗಳು ಬಾಕಿಯಿರುವಾಗಲೇ ಅವರು ಎಲಿಮಿನೇಟ್ ಆಗಿರುವುದು ಬಿಗ್ ಬಾಸ್ ವೀಕ್ಷಕರನ್ನು ಸಿಟ್ಟಿಗೆಬ್ಬಿಸಿದೆ.
Comments are closed.