ಕರಾವಳಿ

ಪಲಿಮಾರು ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ಮುಸಲ್ಮಾನರಿಂದ ಹೊರೆ ಕಾಣಿಕೆ

Pinterest LinkedIn Tumblr

ಉಡುಪಿ: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಕೆಲವು ಭಾಗದಲ್ಲಿ ಕಳೆದ ಹಲವು ಸಮಯಗಳಿಂದ ಕೋಮು ಸೌಹರ್ದತೆಯನ್ನು ಕಡೆಸುವಂತಹ ಘಟನೆಗಳು ಅಗಾಗ ನಡೆಯುತ್ತಿವೆ. ಭಿನ್ನ ಧರ್ಮಗಳ ಮಧ್ಯೆ ಉಂಟಾಗಿರುವ ಬಿರುಕುಗಳಿಗೆ ಹಲವು ಜೀವಗಳು ಬಲಿಯಾಗಿವೆ. ಈ ಮದ್ಯೆ ಕರಾವಳಿಯಲ್ಲಿ ಶಾಂತಿ ನೆಲಸಿ ಸೌಹರ್ದತೆ ಮೂಡಿಸುವ ಪ್ರಯತ್ನಕ್ಕೆ ಉಡುಪಿಯ ಮುಸ್ಲಿಂ‌ ಸಮಯದಾಯ ಹೆಜ್ಜೆ ಇಟ್ಟಿದೆ.

ಉಡುಪಿಯಲ್ಲಿ ನಡೆಯಲಿರುವ ಪಲಿಮಾರು ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಜಿಲ್ಲೆಯ‌ ಮುಸಲ್ಮಾನ ಭಾಂದವರು ಹೊರೆ ಕಾಣಿಕೆಯನ್ನ ಸಲ್ಲಿಸುವುದರ ಮೂಲಕ ಕೋಮು ಸೌಹರ್ದತೆ ಮೂಡಿಸುವ ಕಾರ್ಯಕ್ಕೆ ಮುನ್ನುಡಿ‌ ಬರೆದಿದ್ದಾರೆ.

ಉಡುಪಿಯ ಜೋಡುಕಟ್ಟೆಯಿಂದ ವಿವಿಧ ಅಲಂಕೃತ ವಾಹನಗಳಲ್ಲಿ ಪರ್ಯಾಯದ ಮಹೋತ್ಸವದ ಅನ್ನದಾನಕ್ಕೆ ಬೇಕಾದ ಅಕ್ಕಿ,ತರಕಾರಿ,ಧಾನ್ಯ ಹಾಗೂ ಹಣ್ಣು ಹಂಪಲುಗಳನ್ನು ಮೆರವಣಿಗೆಯ ಮೂಲಕ ಕೊಂಡ್ಯೊಯ್ದು,ಪರ್ಯಾಯ ಮಹೋತ್ಸವಕ್ಕೆ ಕಾಣಿಕೆಯಾಗಿ ಸಲ್ಲಿಸಿದರು.

ಕರಾವಳಿಯಲ್ಲಿ ಧರ್ಮಗಳ‌ ಮಧ್ಯೆ ಕೋಮು ಸಾಮರಸ್ಯ ಹಾಗೂ ಶಾಂತಿ ನೆಲಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು‌ ಹಮ್ಮಿಕೊಳ್ಳಲಾಗಿದೆ ಎಂದು ಮುಸ್ಲಿಂ ಭಾಂಧವರು ಹೇಳಿದ್ದಾರೆ.

ಈ ಹಿಂದೆ ಉಡುಪಿಯಲ್ಲಿ‌ ನಡೆದ ಹಿಂದೂ ಸಮಾಜೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ ಹಾಗೂ ಪಲಿಮಾರು ಶ್ರೀಗಳ ಪುರ ಪ್ರವೇಶ ಸಂಧರ್ಭದಲ್ಲೀ ಭಾಗವಹಿಸಿದ್ದ ಮಜ್ಜಿಗೆ ವಿತರಿಸಿ ಗಮನ ಸೆಳೆದಿದ್ದರು.

Comments are closed.