ಈ ವಾರ ಬಿಗ್ಬಾಸ್ನಲ್ಲಿ ಆಗಿರುವ ಘಟನೆ, ಬೇಜವಾಬ್ದಾರಿಯ ವರ್ತನೆ ಬಗ್ಗೆ ಮನೆ ಕ್ಯಾಪ್ಟನ್ ಜಗನ್’ಗೆ ಬಿಗ್ ಬಾಸ್ ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ಜಗನ್ ಬಿಗ್ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ಆಗಿದ್ದು, ಕೂಲಾಗಿ ನಡೆದುಕೊಳ್ಳಬೇಕಿದ್ದ ಕ್ಯಾಪ್ಟನ್ ಟಾಸ್ಕಿನುದ್ದಕ್ಕೂ ಆಕ್ರೋಶ ಭರಿತನಾಗಿ ನಡೆದುಕೊಂಡ ರೀತಿ ಹಾಗು ಇತರರನ್ನು ನಡೆಸಿಕೊಂಡ ರೀತಿಗೆ ಬಿಗ್ ಬಾಸ್ ಎಚ್ಚರಿಕೆಯನ್ನು ನೀಡಿದೆ.
ಒಂದು ವಾರದವರೆಗೆ ಮನೆಯ ಎಲ್ಲ ಆಗು ಹೋಗುಗಳಿಗೆ ಜಗನ್ ಅವರೇ ನೇರ ಹೊಣೆಯಾಗಿದ್ದರು. ಟಾಸ್ಕ್ ಹಾಗೂ ಅದನ್ನು ಹೊರತುಪಡಿಸಿ ಮನೆಯ ಸದಸ್ಯರನ್ನು ಸೂಕ್ತವಾಗಿ ಹ್ಯಾಂಡಲ್ ಮಾಡಬೇಕಾಗಿತ್ತು. ಮನೆಯಲ್ಲಿ ಯಾವುದೇ ಗಲಾಟೆಗಳು ಉಂಟಾಗದಂತೆ ನೋಡಿಕೊಳ್ಳಬೇಕಿತ್ತು. ಆದರೆ, ಜಗನ್ ಮಾತ್ರ ಕ್ಯಾಪ್ಟನ್ಸಿಯನ್ನು ಸರಿಯಾಗಿ ನಿಭಾಯಿಸಲಿಲ್ಲ.
ಈ ಹಿನ್ನೆಲೆ ಕನ್ಫೆಶನ್ ರೂಮಿಗೆ ಜಗನ್ ಆವರನ್ನು ಕರೆಯಿಸಿಕೊಂಡ ಬಿಗ್ಬಾಸ್ ಸಖತ್ ಆಗಿ ಕ್ಲಾಸ್ ತೆಗೆದುಕೊಂಡ್ರು. ಮನೆಯ ಯಾವ ಸದಸ್ಯರಲ್ಲಿಯೂ ಟಾಸ್ಕ್ನಲ್ಲಿ ಆಸಕ್ತಿ, ಸ್ಫೂರ್ತಿ ಆರಂಭದಿಂದಲೂ ಕಾಣುತ್ತಿಲ್ಲ. ಬಿಗ್ಬಾಸ್ ನೀಡಿದ ಬಟ್ಟೆಗಳನ್ನು ಧರಿಸುತ್ತಿಲ್ಲ. ಆಟದ ನಿಯಮಗಳನ್ನು ಪದೇ ಪದೇ ಮುರಿಯಲಾಗುತ್ತಿದೆ. ಕೆಲ ಸ್ಪರ್ಧಿಗಳು ತಮಗೆ ನೀಡಲಾದ ಪಾತ್ರದಿಂದ ಹೊರ ಬರುತ್ತಿದ್ದಾರೆ. ಇದೆಲ್ಲ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಮನೆಯ ಕ್ಯಾಪ್ಟನ್ ಆಗಿರುವ ನಿಮ್ಮ ಕರ್ತವ್ಯ. ಆದರೆ, ನೀವು ಕೂಡ ಹಲವಾರು ಬಾರಿ ಮನೆಯ ನಿಯಮಗಳನ್ನು ಉಲ್ಲಂಘಿಸಿದ್ದೀರಿ. ಇನ್ನು ಮುಂದೆ ಹೀಗಾಗದಂತೆ ಎಚ್ಚಿರಿಕೆ ವಹಿಸುವಂತೆ ನಿಮಗೆ ಕೊನೆಯ ಎಚ್ಚರಿಗೆ ನೀಡುತ್ತೇವೆ ಎಂದು ಹೇಳಿದ್ರು ಬಿಗ್ಬಾಸ್.
ಇನ್ನು ಕನ್ಫೆಶನ್ ರೂಮಿನಿಂದ ಹೊರ ಬಂದ ಜಗನ್, ಈ ವಿಷಯವನ್ನು ಅನುಪಮಾ ಮುಂದೆ ಹೇಳಿಕೊಂಡ್ರು. ಬಿಗ್ಬಾಸ್ ನನ್ನ ಮುಖಕ್ಕೆ ಊಗಿದು ಕಳಿಸಿದ್ರು. ಇನ್ನ ಮೇಲೆ ಚೆನ್ನಾಗಿ ಆಟವಾಡಬೇಕು ಎಂದು ತೀರ್ಮಾನ ಮಾಡಿದ್ರು.
ಬಳಿಕ ಬಿಗ್ ಬಾಸ್ ಮನೆಯಲ್ಲಿ ಸರ್ಕಸ್ ನಡೆಯಿತು. ಇದಾದ ಬಳಿಕ ದಿವಾಕರ್ ಅವರು ರಿಯಾಜ್ ಜೊತೆ ನಡೆದುಕೊಂಡ ದುರ್ವರ್ತನೆಗೆ ಕ್ಷಮೆ ಕೇಳಿದರು. ನಂತರ ಚಂದನ್ ಶೆಟ್ಟಿ ಜೊತೆ ಸೇರಿಕೊಂಡು ಸಮೀರಾಯಾಚಾರ್ಯರೊಂದಿಗೆ ರಿಯಾಜ್ ವಿರುದ್ಧವೇ ದೂರು ನೀಡುತ್ತಿದ್ದರು. ಇದಕ್ಕೆ ಚಂದ ಶೆಟ್ಟಿ ಕೂಡ ತುಪ್ಪ ಸುರಿಯು ರೀತಿಯಲ್ಲಿ ಸಮೀರಾಚಾರ್ಯರ ಕಿವಿಯೂದುತ್ತಿದ್ದರು. ದಿವಾಕರ್ ಹಾಗು ಚಂದನ್ ಅವರು ರಿಯಾಜ್ ವಿರುದ್ಧ ಮನೆ ಮಂದಿಯನ್ನು ಎತ್ತಿಕಟ್ಟುವ ತಮ್ಮ ಹುನ್ನಾರವನ್ನು ಮಾತ್ರ ಬಿಟ್ಟಂತೆ ಕಾಣುತ್ತಿಲ್ಲ. ವಾರದ ಕತೆ ಕಿಚ್ಚ ಸುದೀಪನ ಜೊತೆಯಲ್ಲಿ ನಾಳೆ ಏನೆಲ್ಲ ಆಗುತ್ತೆ ಎಂಬುದನ್ನು ನೋಡಲೇಬೇಕು….