
https://www.facebook.com/HGGBtheOfficial/?pnref=story
ಕನ್ನಡದ ಪ್ರತಿಭಾವಂತ ಹಿರಿಯ, ಖ್ಯಾತ ನಟ ಅನಂತ್ ನಾಗ್ ಹಾಗು ನಟಿ ರಾಧಿಕಾ ಚೇತನ್ ಮುಖ್ಯ ಭೂಮಿಕೆಯಲ್ಲಿರುವ “ಹೊಟ್ಟೆಗಾಗಿ ಗೇಣುಬಟ್ಟೆಗಾಗಿ’ ಕನ್ನಡ ಸಿನೆಮಾ ಶೀಘ್ರವೇ ತೆರೆಕಾಣಲಿದ್ದು, ಈ ಸಿನೆಮಾದ ದಿನನಿತ್ಯದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಲು ಈ ಮೇಲಿರುವ ಸಿನೆಮಾದ ಅಧಿಕೃತ ಫೇಸ್ಬುಕ್ ಪೇಜಿಗೆ ಲೈಕ್ ಕೊಡಬಹುದು.
ಬಹಳ ನಿರೀಕ್ಷಿತ ಸಿನಿಎಮಾವಾಗಿರುವ “ಹೊಟ್ಟೆಗಾಗಿ ಗೇಣುಬಟ್ಟೆಗಾಗಿ’ ಸಿನೆಮಾವನ್ನು ಕಲರ್ಸ್ ಆಫ್ ಆನೇಕಲ್ ಹಾಗು ACME ಮೂವೀಸ್ ಇಂಟೆರ್ ನ್ಯಾಷನಲ್ ನಿರ್ಮಿಸಿದೆ. ನರೇಂದ್ರ ಬಾಬು (ಕಬಡ್ಡಿ ) ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ-ನಿರ್ದೇಶನ ಮಾಡಿದ್ದಾರೆ.
ಈ ಸಿನೆಮಾದ ಆಡಿಯೋ ಬಿಡುಗಡೆ ಡಿಸೆಂಬರ್ 9 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಚಿತ್ರದಲ್ಲಿ ಎರಡು ಜನರೇಷನ್ಗಳ ಕತೆ ಇದೆ. ಹಿರಿಯ ಪೀಳಿಗೆಯನ್ನು ಅನಂತ್ ನಾಗ್ ಪ್ರತಿನಿಧಿಸಿದರೆ, ಯುವ ಪೀಳಿಗೆಯನ್ನು ರಾಧಿಕಾ ಚೇತನ್ ರೆಪ್ರೆಸೆಂಟ್ ಮಾಡಿದ್ದಾರೆ.
ಈ ಸಿನೆಮಾಗೂ ಮುನ್ನ ACME ಮೂವೀಸ್ ಇಂಟೆರ್ ನ್ಯಾಷನಲ್ ಸಂಸ್ಥೆ “ಮಾರ್ಚ್-22 ‘ ಸಿನೆಮಾವನ್ನು ನಿರ್ಮಿಸಿತ್ತು. ಈ ಸಿನೆಮಾ ಕರ್ನಾಟಕ ಹಾಗು ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿತ್ತು.
Comments are closed.