ಕರಾವಳಿ

ಬೋಂದೆಲ್ ಬಳಿ ಬಸ್- ಟ್ರಾಕ್ಟರ್ ಮಧ್ಯೆ ಅಪಘಾತ : ಟ್ರಾಕ್ಟರ್ ಚಾಲಕ ಗಂಭೀರ

Pinterest LinkedIn Tumblr

ಮಂಗಳೂರು, ಡಿಸೆಂಬರ್.7: ಬೋಂದೆಲ್ ಸಮೀಪ ಇಂದು ಬೆಳಿಗ್ಗೆ ಖಾಸಗಿ ಬಸ್ ಮತ್ತು ಟ್ರಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಟ್ರಾಕ್ಟರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟ್ರಾಕ್ಟರ್ ಚಾಲಕ ಗಾಯಗೊಳಂದಿಗೆ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.

ಅಪಘಾತದಲ್ಲಿ ಟ್ರಾಕ್ಟರ್ ಚಾಲಕ ಶಿವ(45) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಖಾಸಗಿ ಬಸ್ ಬೋಂದೇಲ್-ವಿಮಾನ ನಿಲ್ದಾಣ ರಸ್ತೆಯಿಂದ ಪಚ್ಚನಾಡಿಗೆ ತಿರುಗುವಲ್ಲಿ ಈ ಅಪಘಾತ ಸಂಭವಿಸಿದೆ. ಪೊಲೀಸರು ಅಪಘಾತ ಪ್ರಕರಣ ದಾಖಲಿಸಿದ್ದಾರೆ.

Comments are closed.