ಮನೋರಂಜನೆ

ಖ್ಯಾತ ನಟಿಯೊಬ್ಬಳು ಮದ್ಯದ ಅಮಲಿನಲ್ಲಿ ತೋರಿರುವ ಅವತಾರ ನೋಡಿ

Pinterest LinkedIn Tumblr
Actress Urvashi

ಬಹುಭಾಷಾ ಖ್ಯಾತ ನಟಿಯಾಗಿರುವ ಉರ್ವಶಿ ಮದ್ಯ ಸೇವಿಸಿ, ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವಂತೆ ಸಾರ್ವಜನಿಕ ಸ್ಥಳದಲ್ಲಿ ವರ್ತಿಸಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ಕಳೆದ ಮೂರು ದಶಕಗಳಿಂದ ಸ್ಯಾಂಡಲ್‌ವುಡ್, ಕಾಲಿವುಡ್ ಮತ್ತು ಟಾಲಿವುಡ್ ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಉರ್ವಶಿ ಕೇವಲ ಮದ್ಯ ಸೇವನೆಯಿಂದಾಗಿ ಕೆಟ್ಟ ಹೆಸರು ಪಡೆದಿರುವುದು ವಿಪರ್ಯಾಸವೇ ಸರಿ.

ಶೂಟಿಂಗ್ ಸಮಯದಲ್ಲೂ ಒಂದೆರೆಡು ಪೆಗ್ ಏರಿಸಿಯೇ ಹಾಜರಾಗುತ್ತಾರೆ ಎನ್ನುವ ಆರೋಪಗಳ ಮಧ್ಯೆ, ಸಾರ್ವಜನಿಕ ಸ್ಥಳದಲ್ಲಿಯೂ ಕುಡಿದು ಹಾದಿ ರಂಪ ಬೀದಿ ರಂಪ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಎರಡು ಬಾರಿ ವಿವಾಹವಾಗಿರುವ ನಟಿ ಉರ್ವಶಿ, ಸಂಸಾರಿಕ ಗೊಂದಲವೋ, ನಟನೆಯ ಗೊಂದಲವೋ ಯಾವುದೋ ಕಾರಣಕ್ಕಾಗಿ ಕುಡಿಯುವುದು ಹವ್ಯಾಸವಾಗಿ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Comments are closed.