ಕರ್ನಾಟಕ

ಶಾಲೆಗೆ ಹೋದ ಬಾಲಕಿಯರು ನಾಪತ್ತೆ

Pinterest LinkedIn Tumblr


ಚಿಕ್ಕೋಡಿ: ತಾಲೂಕಿನ ಬೋರಗಾಂವ್ ಗ್ರಾಮದ ಪ್ರೌಢ ಶಾಲೆಗೆ ಹೋಗಿದ್ದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ.

ಬೋರಗಾಂವ್ ಗ್ರಾಮದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಗ ಮಾಡುತ್ತಿದ್ದ ವಿದ್ಯಾರ್ಥಿನಿಯರಾದ ಶಾಲು ಮಿಶ್ರಾ (15) ಆರತಿ ಪಾಟೀಲ್ (15)
ನಾಪತ್ತೆಯಾಗಿದ್ದಾರೆ.

ಗುರುವಾರ ಬೆಳಗ್ಗೆ ಮುಂಜಾನೆ ಶಾಲೆಗೆ ಹೋಗುವುದಾಗಿ ಹೇಳಿ ಹೋದ ಬಾಲಕಿಯರು, ಸಾಯಂಕಾಲವಾದರೂ ಮರಳಿ ಮನೆಗೆ ಬಂದಿಲ್ಲ. ವಿದ್ಯಾರ್ಥಿನಿಯರ ಪೋಷಕರು

ಸದಲಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪಹರಣ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯರಿಗಾಗಿ ಶೋಧ ನಡೆಸುತ್ತಿದ್ದಾರೆ.

Comments are closed.