ಅಂತರಾಷ್ಟ್ರೀಯ

​ಮೊದಲ ನೋಟದಲ್ಲಿ ಹುಟ್ಟುವುದು ಕಾಮ, ಪ್ರೀತಿಯಲ್ಲ

Pinterest LinkedIn Tumblr

ಆ್ಯಂಮ್‌ಸ್ಟೆರ್‌ಡಾಮ್‌: ಲವ್‌ ಅಟ್‌ ಫಸ್ಟ್‌ ಸೈಟ್‌ ಅನ್ನುವುದೊಂದು ಮಿಥ್ಯೆ, ಮೊದಲ ನೋಟದಲ್ಲಿ ಹುಟ್ಟುವುದು ಕಾಮವೇ ಹೊರತು, ಪ್ರೀತಿಯಲ್ಲ ಎನ್ನುತ್ತಾರೆ ನೆದರ್ಲೆಂಡ್‌ನ ಗ್ರೊನಿಂಜೆನ್‌ ವಿವಿಯ ಮನಶಾಸ್ತ್ರಜ್ಞರು.

ಈ ಮನಶಾಸ್ತ್ರಜ್ಞರ ತಂಡವು 396 ಮಂದಿಯನ್ನು ಈ ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಿದೆ. ಇದರಲ್ಲಿ ಹೆಚ್ಚಿನವರು ಮಹಿಳೆಯರು. ಅಧ್ಯಯನಕ್ಕೊಳಪಟ್ಟ ಹೆಚ್ಚಿನವರು ಜರ್ಮನ್‌ ಮತ್ತು ಡಚ್‌ ವಿದ್ಯಾರ್ಥಿಗಳು. ಮೊದಲ ನೋಟದಲ್ಲೇ ಪ್ರೀತಿಗಿಂತ ದೈಹಿಕ ಆಕರ್ಷಣೆಯೇ ಹೆಚ್ಚು ಪ್ರಬಲ ನಿಜ ಎಂಬುದನ್ನು ಅವರೆಲ್ಲ ಸಮ್ಮತಿಸಿದ್ದಾರೆ ಎಂದು ಅಧ್ಯಯನ ವಿವರಿಸಿದೆ.

ಆನ್ಲೈನ್‌ ಸಮೀಕ್ಷೆ ಮೂಲಕ ಅವರಿಗೆಲ್ಲ ಪ್ರಸಕ್ತ ಅವರ ರೊಮ್ಯಾಂಟಿಕ್‌ ರಿಲೇಷನ್‌ಶಿಪ್‌ ಬಗ್ಗೆ ಕೇಳಲಾಗಿತ್ತು. ಬಳಿಕ ಅವರಿಗೆ ಅಪರಿಚಿತರ ಪೋಟೊ ತೋರಿಸಲಾಗಿತ್ತು. ಆ ಪೋಟೊದಲ್ಲಿರುವವರ ಬಗ್ಗೆ ಎಷ್ಟರ ಮಟ್ಟಿಗಿನ ಆಕರ್ಷಣೆ ಉಂಟಾಗಿದೆ ಎಂಬುದನ್ನೂ ಅವರಿಂದಲೇ ತಿಳಿಯಲಾಯಿತು.

ಪ್ರೀತಿ, ಅನ್ಯೋನ್ಯತೆ, ಉತ್ಸಾಹ, ಬದ್ಧತೆ, ಕಾಮದ ಹಂಬಲಗಳ ಬಗ್ಗೆ ಕೇಳಲಾಯಿತು. ”ನಾನು ಮತ್ತು ಆ ವ್ಯಕ್ತಿ ಪರಸ್ಪರ ಸಂಬಂಧ ಹೊಂದಿದ್ದೇವೆಂದು ಭಾವಿಸುತ್ತೇನೆ’, ‘ಮೊದಲ ನೋಟದಲ್ಲೇ ಪ್ರೀತಿಯನ್ನು ಅನುಭವಿಸುತ್ತಿರುವುದಾಗಿ ಭಾವಿಸಿದ್ದೇನೆ,’ ಎಂಬಂಥ ಹೇಳಿಕೆಗಳು ಅವರಿಂದ ಬಂದಿವೆ ಎಂದು ಅಧ್ಯಯನ ತಂಡ ಹೇಳಿದೆ.

90 ರಿಂದ 20 ನಿಮಿಷದೊಳಗಿನ ಭೇಟಿಯಲ್ಲಿ ಭಾಗಿಗಳಾಗಿದ್ದ 32 ಮಂದಿ ಲವ್‌ ಅಟ್‌ ಫಸ್ಟ್‌ ಸೈಟ್‌ ಅನುಭವಾಗಿದೆ ಎಂದು ಹೇಳಿದ್ದರೆ ಸ್ಪೀಡ್‌ ಡೇಟಿಂಗ್‌ನಲ್ಲಿ ಅಂಥ ಯಾವುದೇ ಅನುಭವಾಗಿಲ್ಲ ಎಂದು ತಿಳಿಸಿದ್ದಾರಂತೆ.

ಒಟ್ಟಿನಲ್ಲಿ ಮೊದಲ ನೋಟದ ಪ್ರೀತಿ ಸಾಮಾನ್ಯವಾಗಿ ಭಾವೋದ್ರೇಕಿತ ಪ್ರೇಮವನ್ನು ಹೋಲುತ್ತದೆ ಎಂಬುದು ಸಂಶೋಧನೆಯಲ್ಲಿ ಕಂಡು ಬಂದಿದೆ ಎನ್ನುತ್ತಾರೆ ಮನಶಾಸ್ತ್ರಜ್ಞರು.

Comments are closed.