ಮನೋರಂಜನೆ

ನಟಿಯಂತೆ ಕಾಣಲು 50 ಬಾರಿ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ ಅಭಿಮಾನಿ

Pinterest LinkedIn Tumblr

ತಮ್ಮ ಮೆಚ್ಚಿನ ಸೆಲೆಬ್ರಿಟಿಗಳಂತೆ ಹೇರ್‌ಸ್ಟೈಲ್‌, ಡ್ರೆಸ್‌ ಹೀಗೆ ಅವರ ಸ್ಟೈಲ್‌ ಅನುಕರಣೆ ಮಾಡುವವರನ್ನು ನೋಡಿರಬಹುದು.

ಆದರೆ ಇಲ್ಲೊಬ್ಬಾಕೆ ಥೇಟ್‌ ತನ್ನ ಮೆಚ್ಚಿನ ನಟಿಯಂತೆ ಕಾಣಿಸಿಕೊಳ್ಳಬೇಕೆಂದು 50 ಬಾರಿ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ.

ಸಹರ್‌ ತಾಬರ್‌ ಎಂಬ ಇರಾನಿ ಮಹಿಳೆ ಹಾಲಿವುಡ್‌ ನಟಿ ಏಂಜಲಿನಾ ಜೋಲಿಯ ಬಹುದೊಡ್ಡ ಅಭಿಮಾನಿ. ತಾನು ಆಕೆಯಂತೆಯೇ ಕಾಣಬೇಕೆಂದು ಬರೋಬರಿ 50 ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು, ಮೈ ತೂಕ ಇಳಿಸಿಕೊಂಡಿದ್ದಾರೆ.

ಈಕೆ ತನ್ನ ಬದಲಾದ ರೂಪವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದು ಅಚ್ಚರಿಯೆಂದರೆ 48 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ದಿನದಿಂದ-ದಿನಕ್ಕೆ ಈಕೆಯ ಫಾಲೋವರ್ಸ್‌ ಸಂಖ್ಯೆ ಹೆಚ್ಚಾಗುತ್ತಿದೆ.

ಕೆಲವರು ಒಳ್ಳೆಯ ಕಮೆಂಟ್‌ ಮಾಡಿದರೆ ಮತ್ತೆ ಕೆಲವರು ಕಾರ್ಟೂನ್‌ ರೀತಿ ಕಾಣುತ್ತಿದ್ದೀಯ ಎಂದು ಕಮೆಂಟ್‌ ಮಾಡಿದ್ದಾರೆ.

Comments are closed.