ಮನೋರಂಜನೆ

ಬಿಗ್‌ಬಾಸ್‌’ನಲ್ಲಿ ಜಗನ್‌ಗೆ ಕಿಸ್ ಕೊಟ್ಟು ಗಂಡ ಎಂದ ಆಶಿತಾ!!!

Pinterest LinkedIn Tumblr

ಬಿಗ್‌ಬಾಸ್‌ ಸ್ಪರ್ಧಿಗಳು ವಾರದ ಲಕ್ಷುರಿ ಬಜೆಟ್‌ ಟಾಸ್ಕ್‌ನಲ್ಲಿ ಮಗ್ನರಾಗಿದ್ದಾರೆ. ಚಟುವಟಿಕೆ ವಿಷಯವಾಗಿ ಮನೆಯಲ್ಲಿ ಆಗಾಗ ಗೊಂದಲಗಾಳುತ್ತಿದ್ದರೂ, ಆಟವನ್ನು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ ಬಿಗ್‌ ಮಂದಿ.

ಗುರುವಾರ ಪ್ರಸಾರವಾದ ಬಿಗ್‌ಬಾಸ್‌ ಎಪಿಸೋಡ್‌ನಲ್ಲಿ ಹಲವು ಕುತೂಹಲಕರ ಘಟನೆಗಳು ನಡೆದವು. ಅದರಲ್ಲಿ ಆಶಿತಾ ಎಲ್ಲರೆದುರು ಜಗನ್‌ಗೆ ಕಿಸ್‌ ಮಾಡಿ, ‘ನನ್ನ ಗಂಡನಿಗೆ ಮುತ್ತು ಕೊಟ್ಟಿದ್ದೇನೆ ಅದರಲ್ಲಿ ತಪ್ಪೇನು’ ಎಂದು ಪ್ರಶ್ನಿಸಿದರು. ಅಷ್ಟಕ್ಕೂ ಆಶಿತಾ ಹೀಗೆ ಮಾಡಿದ್ದು ಹೊರ ನೋಟಕ್ಕೆ ಟಾಸ್ಕ್‌ಗಾಗಿ ಅನ್ನಿಸಿದರೂ, ಈ ಘಟನೆಯ ಸುತ್ತ ನಾನಾ ರೀತಿಯ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಹುಟ್ಟಿಕೊಳ್ಳುತ್ತಿವೆ.

ಬಿಗ್‌ಬಾಸ್‌ ನೀಡಿದ ಟಾಸ್ಕ್‌ ಅನ್ವಯ ಆಶಿತಾ ಒಬ್ಬ ಮರೆಗುಳಿ ಡಾಕ್ಟರ್‌ ಆಗಿದ್ದರು. ಬಿಗ್‌ ಮನೆಯಲ್ಲಿನ ಉಡುಪಿ ಹೋಟೆಲ್‌ಗೆ ಜಗನ್‌ ಟ್ಯಾಕ್ಸಿಯಲ್ಲಿ ಬಂದ ಆಶಿತಾ, ದುಡ್ಡು ಕೊಟ್ಟು ಮುತ್ತು ಕೊಡುತ್ತಾರೆ. ಇದನ್ನು ಪ್ರಶ್ನಿಸಲು ಬಂದ ಅಧಿಕಾರಿ ರಿಯಾಜ್‌ಗೆ ‘ನನ್ನ ಗಂಡನಿಗೆ ಮುತ್ತು ಕೊಡದೇ ಮತ್ಯಾರಿಗೆ ಕೊಡಲಿ’ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಆಶಿತಾ ಜಗನ್‌ಗೆ ಮುತ್ತು ಕೊಟ್ಟಿದ್ದು ಇದೇ ಮೊದಲಲ್ಲ. ಕಳೆದ ಎಪಿಸೋಡ್‌ನಲ್ಲಿ ಜಗನ್‌ಗೆ ಕೆನ್ನೆಗೆ ಕಿಸ್‌ ಮಾಡಿ, ಲಿಪ್‌ಸ್ಟಿಕ್‌ ಮಾರ್ಕ್‌ನ್ನೂ ಒರೆಸಿದ್ದರು. ಒಟ್ಟಾರೆ ಈ ಬಾರಿಯ ಬಿಗ್‌ಬಾಸ್‌ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಲವ್ ಕಹಾನಿಗಳು ನಡೆಯುತ್ತಿವೆ ಎಂಬ ಅನುಮಾನ ಪ್ರೇಕ್ಷಕರಲ್ಲಿರುವುದಂತೂ ಸುಳ್ಳಲ್ಲ.

Comments are closed.