ರಾಷ್ಟ್ರೀಯ

ಹಿಂದೂ ಎಂದು ಹೇಳಿಕೊಳ್ಳುವ ಅಮಿತ್ ಶಾ ಮೂಲತಃ ಜೈನ್: ರಾಹುಲ್ ಗಾಂಧಿ

Pinterest LinkedIn Tumblr

ಅಹ್ಮದಾಬಾದ್: ತಮ್ಮ ವಿರುದ್ಧ ದ ಹಿಂದೂಯೇತರ ವಿವಾದಕ್ಕೆ ಸಂಬಂಧಿಸಿದಂತೆ ಮೌನ ಮುರಿದಿರುವ ಎಐಎಸಿಸಿ ಉುಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದು, ಅಮಿತ್ ಶಾ ತಮ್ಮನ್ನು ತಾವು ಹಿಂದೂ ಎಂದು ಬಿಂಬಿಸಿಕೊಳ್ಳುತ್ತಾರೆ ಅವರು ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆ ಸಂಬಂಧ ಪಕ್ಷ ಪ್ರಚಾರ ಕಾರ್ಯದಲ್ಲಿ ತೊಡಗಿರುವ ರಾಹುಲ್ ಗಾಂಧಿ ಪಕ್ಷದ ಮುಖಂಡರೊಂದಿಗೆ ಇಂದು ಸಭೆ ನಡೆಸಿದರು. ಬಳಿಕ ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರಿದ ಅವರು, ನನ್ನ ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರಿಗೆ ತಮ್ಮ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಬಗ್ಗೆ ತಿಳಿದಿಲ್ಲ ಎಂದೆನಿಸುತ್ತದೆ. ತಾವು ಹಿಂದೂ ಎಂದು ಬಿಂಬಿಸಿಕೊಳ್ಳುವ ಅಮಿತ್ ಶಾ ಹಿಂದೂವಲ್ಲ. ಅವರು ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಧರ್ಮ ಯಾವಾಗಲೂ ಖಾಸಗಿ ವಿಚಾರವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ರಾಹುಲ್, ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವುದು ಸೂಕ್ತವಲ್ಲ. ನನ್ನ ಅಜ್ಜಿ ಹಾಗೂ ಕುಟುಂಬದ ಎಲ್ಲರೂ ಶಿವಭಕ್ತರು. ಆದರೆ ಅದನ್ನು ನಾವು ಎಲ್ಲೂ ಹೇಳಿಕೊಳ್ಳುವುದಿಲ್ಲ. ಏಕೆಂದರೆ ಧರ್ಮ ಎನ್ನುವುದು ವೈಯಕ್ತಿಕ ವಿಚಾರ. ನಮ್ಮ ನಂಬಿಕೆ ವೈಯಕ್ತಿಕ ವಿಚಾರ. ಈ ಬಗ್ಗೆ ಯಾರಿಗೂ ಪ್ರಮಾಣಪತ್ರ ನೀಡಬೇಕಾದ್ದಿಲ್ಲ. ನಾವು ಧರ್ಮದ ದಲ್ಲಾಳಿಗಳಲ್ಲ. ಹೀಗಾಗಿ ಅದನ್ನು ರಾಜಕೀಯಕ್ಕಾಗಿ ನಾವು ಬಳಸುವುದಿಲ್ಲ ಎಂದು ತಿರುಗೇಟು ನೀಡಿದರು.

ಈ ಹಿಂದೆ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅಲ್ಲಿನ ಪ್ರವೇಶ ದಾಖಲಾತಿ ಪುಸ್ತಕದಲ್ಲಿ ಹಿಂದೂಯೇತರರ ಪಟ್ಟಿಯಲ್ಲಿ ಸಹಿ ಮಾಡಿದ್ದರು. ಆ ಮೂಲಕ ವಿವಾದಕ್ಕೆ ಆಸ್ಪದ ನೀಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಮುಖಂಡರು ರಾಹುಲ್ ಗಾಂಧಿ ಹಿಂದೂವಲ್ಲ. ಅವರು ಕ್ರಿಶ್ಚಿಯನ್ನರು ಎಂದು ಟೀಕೆ ಮಾಡಿದ್ದರು.

Comments are closed.