ಮನೋರಂಜನೆ

ದಾಖಲೆ ಮಾಡಿದ ಕತ್ರಿನಾ-ಸಲ್ಮಾನ್ ಹಾಡು: ವಿಶ್ವದಲ್ಲೇ ಕೇವಲ 24 ಗಂಟೆಯಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೊ!

Pinterest LinkedIn Tumblr

ನವದೆಹಲಿ: ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರದ ಸ್ವಗ್ ಸೆ ಸ್ವಾಗತ್ ಹಾಡು ದೊಡ್ಡ ದಾಖಲೆ ಮಾಡಿದೆ. ಯೂಟ್ಯೂಬ್ ನಲ್ಲಿ ಒಂದು ದಿನದಲ್ಲೇ ಅತ್ಯಂತ ಹೆಚ್ಚು ಮಂದಿ ವೀಕ್ಷಣೆ ಮಾಡಿದ ದಾಖಲೆ ಪಡೆದಿದೆ.

ವಿಶಾಲ್ ಶೇಖರ್ ಸಂಗೀತ ರಚಿಸಿರುವ ಸ್ವಗ್ ಸೆ ಸ್ವಾಗತ್ ಹಾಡನ್ನು ಇರ್ಶಾದ್ ಕಾಮಿಲ್ ಬರೆದಿದ್ದಾರೆ. ವಿಶಾಲ್ ದದ್ಲಾನಿ ಮತ್ತು ನೇಹಾ ಬಾಸಿನ್ ಗೀತೆಗೆ ಧ್ವನಿ ನೀಡಿದ್ದಾರೆ.
ಗ್ರೀಸ್ ನಲ್ಲಿ ಚಿತ್ರಿಸಲಾಗಿರುವ ಹಾಡಿನಲ್ಲಿ ಬೆಲ್ಲಿ ಡ್ಯಾನ್ಸ್, ಹಿಪ್ ಹಾಪ್ ಮತ್ತು ಆಫ್ರೋ ನೃತ್ಯಗಳ ಸಂಯೋಜನೆಯಿದೆ. ಸುಮಾರು 100 ಮಂದಿ ಇಲ್ಲಿ ಹೆಜ್ಜೆ ಹಾಕಿದ್ದಾರೆ. ಫ್ರಾನ್ಸ್, ಟ್ರಿನಿಡಾಡ್ ಮತ್ತು ಡೊಬಗೊದಲ್ಲಿ ಕೂಡ ಚಿತ್ರಿಸಲಾಗಿದೆ.ಏಕ್ ತಾ ಟೈಗರ್ ಆಗಿ 5 ವರ್ಷಗಳ ನಂತರ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೆ ತೆರೆಯ ಮೇಲೆ ಜೋಡಿಯಾಗಿದ್ದಾರೆ.

ಆಲಿ ಅಬ್ಬಾಸ್ ಝಫಾರ್ ನಿರ್ದೇಶನದ ಟೈಗರ್ ಜಿಂದಾ ಹೈ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ.

Comments are closed.