ಮನೋರಂಜನೆ

ಬಿಗ್‌ಬಾಸ್ ಮನೆಯಿಂದ ಕೃಷಿ ಔಟ್ ! ಆಶಿತಾ ಸೇಫ್ …

Pinterest LinkedIn Tumblr

ಬಿಗ್‌ಬಾಸ್’ನಲ್ಲಿ ಶನಿವಾರ ಕೃಷಿ ಹೊರಬಿದ್ದಿದ್ದಾರೆ. ಬಿಗ್‌ಬಾಸ್ ಸೀಸನ್‌ 5 ರಲ್ಲಿ ಮನೆಯಿಂದ ಹೊರಹೋಗುವ 5 ನೇ ಸ್ಪರ್ಧಿ ಆಗಿದ್ದಾರೆ ಕೃಷಿ.

ಈ ವಾರ ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಲು ಮನೆಯಲ್ಲಿರುವ 6 ಜನರು ನಾಮಿನೇಟ್‌ ಆಗಿದ್ದರು. ದಿವಾಕರ್, ಸಿಹಿಕಹಿ ಚಂದ್ರು, ಜಗನ್‌, ನಿವೇದಿತಾ ಗೌಡ, ಆಶಿತಾ ಹಾಗೂ ಕೃಷಿ ಈ ವಾರಕ್ಕೆ ನಾಮಿನೇಟ್‌ ಆಗಿದ್ದರು. ಇನ್ನು ಇವರ ಜತೆ ನಾಮಿನೇಟ್ ಆಗಿದ್ದ ಸ್ಪರ್ಧಿ ರಿಯಾಜ್‌ ಅವರನ್ನು ಈ ವಾರದ ಕ್ಯಾಪ್ಟನ್‌ ಚಂದನ್‌ ಅವರು ಸೇಫ್‌ ಮಾಡಿಕೊಂಡಿದ್ದರು.

ವಾರದ ಕಥೆ ಕಿಚ್ಚನ ಜತೆಯಲ್ಲಿ ಎಲಿಮಿನೇಟ್‌ ಪ್ರಕ್ರಿಯೆ ನಡೆಯಿತು. ಎಂದಿನಂತೆ ಮನೆಯವರ ಯೋಗಕ್ಷೇಮ ವಿಚಾರಿಸಿ, ಮನೆಯವರಿಂದಾದ ತಪ್ಪುಗಳನ್ನು ತಿದ್ದಿ ತೀಡಿದ ಬಳಿಕ ಕಿಚ್ಚ ಸುದೀಪ್‌ ಅವರು ಎಲಿಮಿನೇಟ್‌ ಪ್ರಕ್ರಿಯೆಗೆ ಚಾಲನೆ ನೀಡಿದರು. ಎಲ್ಲರಲ್ಲೂ ಪ್ರಶ್ನೆಗಳನ್ನು ಮಾಡುತ್ತ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತ ಮೊದಲಿಗೆ ದಿವಾಕರ್ ಅವರನ್ನು ಸೇಫ್‌ ಮಾಡಿದರು. ಬಳಿಕ ಸಿಹಿಕಹಿ ಚಂದ್ರು, ಜಗನ್‌, ನಿವೇದಿತಾರನ್ನು ಸೇಫ್‌ ಮಾಡಿದ್ರು. ಕೊನೆಯದಾಗಿ ಆಶಿತಾ ಹಾಗೂ ಕೃಷಿ ಉಳಿದುಕೊಂಡರು.

Comments are closed.