ಮನೋರಂಜನೆ

‘ಕಾಲೇಜ್‌ ಕುಮಾರ್‌’ನನ್ನು ವೀಕ್ಷಿಸಿದ ರಶ್ಮಿಕಾ ಹೇಳಿದ್ದೇನು?

Pinterest LinkedIn Tumblr


ಶುಕ್ರವಾರ ತೆರೆಕಂಡ ‘ಕಾಲೇಜ್‌ ಕುಮಾರ್‌’ ಚಿತ್ರ ಪ್ರೇಕ್ಷಕರಿಂದಷ್ಟೇ ಅಲ್ಲದೆ ಸ್ಟಾರ್‌ ನಟ-ನಟಿಯರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರದಲ್ಲಿ ‘ಕೆಂಡ ಸಂಪಿಗೆ’ ನಾಯಕ ವಿಕ್ಕಿ ವರುಣ್‌ ಮತ್ತು ‘ಕಿರಿಕ್‌ ಪಾರ್ಟಿ’ ಬೆಡಗಿ ಸಂಯುಕ್ತಾ ಹೆಗಡೆ ಒಟ್ಟಾಗಿ ಕಾಣಿಸಿಕೊಂಡಿರುವುದು ‘ಕಾಲೇಜ್‌ ಕುಮಾರ್‌’ನ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿತ್ತು.

ಕಿಚ್ಚ ಸುದೀಪ್‌, ನೀನಾಸಂ ಸತೀಶ್‌ ಹಾಗೂ ರಕ್ಷಿತ್‌ ಶೆಟ್ಟಿಯಂತಹ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ‘ಕಾಲೇಜ್‌ ಕುಮಾರ್‌’ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಚಿತ್ರ ತಂಡಕ್ಕೆ ಶುಭಕೋರಿದ್ದಾರೆ. ಇನ್ನು ‘ಕಿರಿಕ್‌ ಪಾರ್ಟಿ’ ಚೆಲುವೆ ರಶ್ಮಿಕಾ ಮಂದಣ್ಣ ಚಿತ್ರವನ್ನು ವೀಕ್ಷಿಸಿದ್ದು, ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಸಂಯುಕ್ತಾ ಹೆಗಡೆ ಅವರ ಅಭಿನಯ ರಶ್ಮಿಕಾ ಅವರನ್ನು ಮೋಡಿ ಮಾಡಿದಂತಿದೆ. ಹಾಗಾಗಿ ಸಂಯುಕ್ತಾರ ನಟನೆಯನ್ನು ರಶ್ಮಿಕಾ ಕೊಂಡಾಡಿದ್ದು, ಚಿತ್ರವನ್ನು ಎಂಜಾಯ್‌ ಮಾಡಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಡೀ ಚಿತ್ರ ತಂಡಕ್ಕೂ ಶುಭಕೋರಿದ್ದಾರೆ.

ಯುತ್‌ಫುಲ್‌ ಕಥಾನಕ ಹೊಂದಿರುವ ಈ ಚಿತ್ರವನ್ನು ಹರಿ ಸಂತೋಷ್‌ ನಿರ್ದೇಶಿಸಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ‘ಕಾಲೇಜ್‌ ಕುಮಾರ್‌’ನಿಗೆ ಮತ್ತೊಂದು ಪ್ಲಸ್‌ ಪಾಯಿಂಟ್‌. ಆರ್ಮುಗಂ ರವಿಶಂಕರ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Comments are closed.