ಅಂತರಾಷ್ಟ್ರೀಯ

ಸಾರ್ವಜನಿಕರ ಬೇಸ್ತುಬೀಳಿಸುತ್ತಿದೆ ಕಲ್ಲಿನ ಮಗು

Pinterest LinkedIn Tumblr


ನ್ಯೂಯಾರ್ಕ್‌ನ ಪ್ರಮುಖ ಶಾಪಿಂಗ್‌ ಬೀದಿಯಲ್ಲಿರುವ ಪಾರ್ಕ್‌ ಅವೆನ್ಯೂ ಎಂಬ ಶಾಪಿಂಗ್‌ ಕಾಂಪ್ಲೆಕ್ಸ್‌ನ ಗಾಜಿನ ಮಳಿಗೆಯಲ್ಲಿ ಗಾಜಿನ ಕಿಟಕಿ ಬಳಿ ಇರುವ ಮಗು ದಾರಿಹೋಕರನ್ನು ಬೇಸ್ತು ಬೀಳಿಸುತ್ತಿದೆ.

ಅದನ್ನು ನೋಡಿದ ದಾರಿಹೋಕರೆಲ್ಲಾ ಒಂದು ಕ್ಷಣ ನಿಂತು “ಅಯ್ಯೋ, ಯಾರೊ ಪುಟ್ಟ ಮಗುವನ್ನು ಬಿಟ್ಟು ಹೋಗಿದ್ದಾರಲ್ಲಾ’ ಎಂದು ಮಳಿಗೆಯವರಿಗೆ ತಿಳಿಸುತ್ತಾರೆ.

ಅದು ಕಲ್ಲಿನಿಂದ ರಚಿಸಲಾಗಿರುವ ಮಗು ಎಂದು ಮಳಿಗೆ ಸಿಬ್ಬಂದಿ ಸಾರ್ವಜನಿಕರಿಗೆ ತಿಳಿಸಿದ ಬಳಿಕ ಬೇಸ್ತು ಬೀಳುವ ಸಂದರ್ಭ ಅವರದ್ದು. ಈ ಕಲಾಕೃತಿಯನ್ನು 1983ರಲ್ಲಿ ಡ್ಯುಯಾನೆ ಹಾನ್ಸನ್‌ ನಿರ್ಮಿಸಿದ್ದರು. ಅದರ ಹರಾಜು ಮೊತ್ತ 53 ಲಕ್ಷ ರೂ.ಗಳಿಂದ 78 ಲಕ್ಷ ರೂ.ವರೆಗೆ ಎಂದು ಮ್ಯಾನ್‌ಹಟನ್‌ನ ಅಮೆರಿಕನ್‌ ಆರ್ಟ್‌ ಅಟ್‌
ಹೆರಿಟೇಜ್‌ ಆಕ್ಷನ್ಸ್‌ ಅಂದಾಜಿಸಿದೆ.

-ಉದಯವಾಣಿ

Comments are closed.