ಮನೋರಂಜನೆ

ತಮಿಳು ಚಿತ್ರ ಮೆರ್ಸಲ್‌ ತಾರಕಕ್ಕೆ ಏರಿದ ವಿವಾದ

Pinterest LinkedIn Tumblr


ಎಲ್ಲ ರಾಜಕೀಯ ಪಕ್ಷಗಳಿಗೂ “ರಾಜಕೀಯ ಹುಲ್ಲು ಗಾವಲು’ ಎನಿಸಿ ಕೊಂಡಿರುವ ತಮಿಳುನಾಡಿನಲ್ಲಿ ಎಲ್ಲವೂ ವಿವಾದವೇ. ಈಗ ಹೊಸ ವಿವಾದ ವಿಜಯ್‌ ಅಭಿನಯದ “ಮೆರ್ಸಲ್‌’ ಸಿನಿಮಾ. ಈ ಚಿತ್ರ ದಲ್ಲಿ ಜಿಎಸ್‌ಟಿ ಬಗ್ಗೆ ಅವಹೇಳನಕಾರಿಯಾಗಿ ಮಾತುಗಳನ್ನು ಆಡಲಾಗಿದೆ ಎನ್ನುವುದು ಆರೋ ಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಇದು ಬರಿ ಸಿನಿಮಾದ ವಿವಾದವಷ್ಟೇ ಅಲ್ಲ, ರಾಜಕೀಯವಾಗಿ ಹೆಜ್ಜೆಯೂರುವ ಅವಕಾಶ ಕಲ್ಪಿಸುವ ವೇದಿಕೆ ಸಹ. ಈ ಚಿತ್ರವನ್ನು ಬಿಜೆಪಿ ವಿರೋಧಿಸಿದರೆ, ಕಾಂಗ್ರೆಸ್‌,ಡಿಎಂಕೆ, ಕಮಲ್‌ ಹಾಸನ್‌ ಬೆಂಬಲಿಸಿದ್ದಾರೆ.

ವಿಜಯ್‌ ಹೇಳಿರುವ ಮಾತುಗಳು: ಸಿನಿಮಾದ ಕ್ಲೈಮಾಕ್ಸ್‌ನಲ್ಲಿ ವಿಜಯ್‌ ಅವರು ಜಿಎಸ್‌ಟಿ ಮೂಲಕ ಸಾರ್ವಜನಿಕರಿಂದ
ಶೇ.28ರಷ್ಟು ತೆರಿಗೆ ಸಂಗ್ರಹ ಮಾಡಿದರೂ ಸರ್ಕಾರ ಉಚಿತವಾಗಿ ವೈದ್ಯಕೀಯ ವ್ಯವಸ್ಥೆ ನೀಡಲು ವಿಫ‌ಲವಾಗಿದೆ ಎನ್ನುತ್ತಾರೆ. ಸಿಂಗಾಪುರದಲ್ಲಿ ಶೇ.7ರಷ್ಟು ತೆರಿ ಗೆ ಸಂಗ್ರಹಿಸಿ ಉಚಿತವಾಗಿ ವೈದ್ಯಕೀಯ ವ್ಯವಸ್ಥೆ ನೀಡಲಾಗುತ್ತದೆ ಎಂಬ ಹೋಲಿಕೆಯನ್ನು ಅವರು ಮಾಡುತ್ತಾರೆ. ಜತೆಗೆ ಮದ್ಯವನ್ನು ಹೊಸ ತೆರಿಗೆಯಿಂದ ಹೊರಗಿಟ್ಟದ್ದನ್ನು ಪ್ರಶ್ನಿಸುವ ಅವರು, ಜನರ ಪ್ರಾಣ ರಕ್ಷಣೆಗಾಗಿರುವ ಔಷಧಗಳ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಿರುವ ಬಗ್ಗೆ ಪ್ರಶ್ನಿಸುತ್ತಾರೆ. ಭಾರತದಲ್ಲಿ ದೇಗುಲಗಳಿಗಿಂತ ಆಸ್ಪತ್ರೆಗಳೇ ಹೆಚ್ಚಾಗಬೇಕು
ಎಂದು ಹೇಳುತ್ತಾರೆ.

ವಿವಾದಕ್ಕೆ ಕಾರಣವಾದ ಅಂಶಗಳು: ಸಿನಿಮಾದ ಸನ್ನಿವೇಶವೊಂದರಲ್ಲಿ ತಮಿಳು ಹಾಸ್ಯನಟ ವಡಿವೇಲು ಬರಿದಾಗಿರುವ ಜೇಬನ್ನು ತೋರಿಸಿ ಅದಕ್ಕೆ ಡಿಜಿಟಲ್‌ ಇಂಡಿಯಾ ಕಾರಣ ಎನ್ನುತ್ತಾರೆ. ಅದಕ್ಕೆ ಸಂಬಂಧಿಸಿದ ಮಾತುಗಳು ಹೀಗಿವೆ “ಭಾರತದಲ್ಲೀಗ ಡಿಜಿಟಲ್‌ ಹಣ ಮಾತ್ರ ಇದೆ. ಯಾರ ಬಳಿಯೂ ಹಣವೇ ಇಲ್ಲ. ದೊಡ್ಡ ಸಾಲುಗಳು ಮಾತ್ರ ಇವೆ’ ಎನ್ನುತ್ತಾರೆ ಡೈಲಾಗ್‌ಗಳಿಗೆ ಕತ್ತರಿ? ಕೇಂದ್ರ ಸರ್ಕಾರದ ನೀತಿ ವಿರುದ್ಧ ಇರುವ ಡೈಲಾಗ್‌ಗಳಿಂದಾಗಿ ರಾಜಕೀಯವಾಗಿ ಪ್ರತಿರೋಧ ಎದುರಿಸುತ್ತಿರುವ ಸಿನಿಮಾದಲ್ಲಿನ ಅಂಶಗಳ ಬಗ್ಗೆ ಕತ್ತರಿ ಹಾಕುವ ಬಗ್ಗೆ ಸಿನಿಮಾ ನಿರ್ಮಾಣ ಸಂಸ್ಥೆತೆ ನಾನ್‌ಡಾಲ್‌ ಸ್ಟುಡಿಯೋ ಲಿಮಿಟೆಡ್‌ ಶನಿವಾರ ಹೇಳಿಕೊಂಡಿದೆ.

ಬರೋಬ್ಬರಿ ಕಲೆಕ್ಷನ್‌: ಕೇಂದ್ರ ಸರ್ಕಾರದ ಯೋಜನೆಗಳ ವಿರುದ್ಧದ ಮಾತುಗಳಿವೆ ಎಂದ ಸಿನಿಮಾಕ್ಕೆ ಈಗ ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ಎಲ್ಲ ರೀತಿಯ ಚಿತ್ರಮಂದಿರಗಳಲ್ಲಿ ಅದು ಹೌಸ್‌ಫ‌ುಲ್‌ ಆಗಿದೆ ಎನ್ನುವುದು ತಮಿಳುನಾಡು ಚಿತ್ರರಂಗದ ಮಾಹಿತಿ.

ಮೆರ್ಸಲ್‌ ಎಂದರೇನು? ಇಷ್ಟಕ್ಕೂ ತಮಿಳು ಭಾಷೆಯಲ್ಲಿ “ಮೆರ್ಸಲ್‌’ ಎಂದರೆ- ಏಕಾಏಕಿ ಒಂದು ಘಟನೆ ಸಂಭವಿಸಿದಾಗ ವ್ಯಕ್ತಿ ತೋರುವ ಆಘಾತಕಾರಿ ಪ್ರತಿಕ್ರಿಯೆ ಅಥವಾ ಭಯ

ರಾಜಕೀಯ ಪ್ರವೇಶ : ಸಿನಿಮಾದಲ್ಲಿನ ಅಂಶಗಳ ಬಗ್ಗೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ಲಾಭ ಪಡೆದು ಕೊಳ್ಳುವ ಪ್ರಯತ್ನ ನಡೆದಿದೆ. ಏಕೆಂದರೆ ಎಐಎಡಿಎಂಕೆ ನಾಯಕಿ ಜಯಲಲಿತಾ ನಿಧನ ಬಳಿಕ ಪ್ರಬಲ ನಾಯಕರು ಇಲ್ಲ. ಹೀಗಾಗಿ, ಅಲ್ಲಿನ ರಾಜಕೀಯ ಕ್ಷೇತ್ರದಲ್ಲಿ ತಳವೂರಲು ಬಿಜೆಪಿ, ಹೊಸ ಪಕ್ಷ ರಚಿಸಲು ಮುಂದಾಗಿರುವ ಬಹುಭಾಷಾ ನಟ ಕಮಲ್‌ಹಾಸನ್‌, ಕಾಂಗ್ರೆಸ್‌, ಪ್ರತಿಪಕ್ಷದಲ್ಲಿರುವ ಡಿಎಂಕೆ ಮತ್ತು ಇತರ ಪಕ್ಷಗಳು ಸಿನಿಮಾದ ಹೆಸರಲ್ಲಿ ಲಾಭ ಪಡೆಯಲು ಮುಂದಾಗುತ್ತಿದ್ದಾರೆ ಎನ್ನುವುದು ಹಗಲಿನಷ್ಟೇ ಸತ್ಯ. ಟ್ವಿಟರ್‌ನಲ್ಲಿ ಬಂದ ಅವರ ಹೇಳಿಕೆಗಳು ಹೀಗಿವೆ.

ಮೋದಿಯವರೇ, ಚಲನಚಿತ್ರಗಳು ತಮಿಳುನಾಡಿನ ಜನತೆಯ ಭಾವಾಭಿವ್ಯಕ್ತಿಗಳ ಪ್ರತೀಕ. “ಮೆರ್ಸಲ್‌’ ಚಿತ್ರದ ವಿಚಾರದಲ್ಲಿ ಮೂಗು ತೂರಿಸುವ ಮೂಲಕ ತಮಿಳುನಾಡಿನ ಜನತೆಯ ಭಾವನೆಗಳಿಗೆ ಧಕ್ಕೆ ತರಬೇಡಿ
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

ಚಿತ್ರದಲ್ಲಿ ಜಿಎಸ್‌ಟಿ, ಡಿಜಿಟಲ್‌ ಇಂಡಿಯಾ ಬಗ್ಗೆ ತಪ್ಪು ಅರ್ಥ ಬರುವಂಥ ಸಂಭಾಷಣೆಗಳಿವೆ. ಅವಕ್ಕೆ ಈ ಕೂಡಲೇ ಕತ್ತರಿ ಹಾಕಬೇಕು. ಇಲ್ಲದಿದ್ದರೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕಾಗುತ್ತದೆ.
ಪೊನ್‌ ರಾಧಾಕೃಷ್ಣನ್‌, ತಮಿಳ್‌ಸೆಲ್ವಿ, ತ.ನಾಡು ಬಿಜೆಪಿ ನಾಯಕರು

ನಿರ್ಮಾಪಕರು ಸರ್ಕಾರದ ಯೋಜನೆ ಶ್ಲಾ ಸುವ ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಕಾನೂನು ಬಂದರೂ ಅಚ್ಚರಿಯಿಲ್ಲ. ಹಿಂದೂ ಸಂಪ್ರದಾಯ ಪ್ರಶ್ನಿಸಿದ್ದ ಪರಾಸಕ್ತಿ ಈಗ ಬಿಡುಗಡೆಯಾದರೆ ಏನು ಗತಿ.
ಪಿ.ಚಿದಂಬರಂ, ಮಾಜಿ ಕೇಂದ್ರ ಸಚಿವ

ಈಗಾಗಲೇ ಮೆರ್ಸಲ್‌ ಚಿತ್ರ ಸೆನ್ಸಾರ್‌ ಪ್ರಮಾಣ ಪತ್ರದೊಂದಿಗೆ ಬಂದಿರುವುದರಿಂದ ಚಿತ್ರದ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ. ಟೀಕೆಗಳನ್ನೇ ಮಾಡಬಾರದು ಎಂದರೆ ಹೇಗೆ. ಸಿನಿಮಾದಲ್ಲಿ ಸರ್ಕಾರವನ್ನು ಪ್ರಶ್ನಿಸಬಾರದೆ?
ಶರತ್‌ ಕುಮಾರ್‌, ಎಐಎಸ್‌ಎಂಕೆ ಪಕ್ಷದ ಮುಖ್ಯಸ್ಥ

ಸಾಮಾಜಿಕ ಸ್ಥಿತಿಗಳನ್ನು ಪ್ರಶ್ನಿಸುವ ವಿಮರ್ಶಕರನ್ನು ತುಳಿಯುವುದ ಬೇಡ.ಪ್ರಶ್ನಿಸಲು ಆರಂಭವಾದರೆ ಮಾತ್ರ ಭಾರತ ಬೆಳಗಲು ಸಾಧ್ಯ. ಮೆರ್ಸಲ್‌ ಸೆನ್ಸಾರ್‌ ಮಾನ್ಯತೆ ಪಡೆದಿದೆ. ಟೀಕೆಗಳನ್ನು ಸೂಕ್ತವಾಗಿ ಎದುರಿಸಿ
ಕಮಲ್‌ ಹಾಸನ್‌, ನಟ

ಜನರ ವಾಕ್‌ ಸ್ವಾತಂತ್ರ್ಯವನ್ನು ಕಾಂಗ್ರೆಸ್‌ ಸದಾ ಬೆಂಬಲಿಸುತ್ತದೆ. ವಾಕ್‌ ಸ್ವಾತಂತ್ರ್ಯವನ್ನು ಗೌರವಿಸುವವರ ಜತೆಯಿದ್ದರೆ ಮಾತ್ರ ಸೃಜನಶೀಲ ವ್ಯಕ್ತಿಗಳು ನಿರ್ಬೀಢೆಯಿಂದ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ
ಶಶಿ ತರೂರ್‌, ಕಾಂಗ್ರೆಸ್‌ ನಾಯಕ

ಎಚ್ಚರಿಕೆ ನೀಡಿದ ನಟ ವಿಜಯ್‌ ಅಭಿಮಾನಿ ಬಳಗ:
ನೆಚ್ಚಿನ ನಟನ ಸಿನಿಮಾ ವಿರುದ್ಧ ಬಿಜೆಪಿ ತಗಾದೆ ತೆಗೆದಿರುವುದಕ್ಕೆ ಅಭಿಮಾನಿಗಳು ಆಕ್ಷೇಪಿಸಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಹಿಡಿಗಾತ್ರದಷ್ಟು ಅಸ್ತಿತ್ವ ಹೊಂದಿದೆ. ಹಾಗಾಗಿ, ಅದು ಯಾವುದೇ ಕಾರಣಕ್ಕೂ ಸಹಸ್ರಾರು ಸಂಖ್ಯೆಯಲ್ಲಿರುವ ವಿಜಯ್‌ ಅಭಿಮಾನಿ
ಗಳನ್ನು ಎದುರು ಹಾಕಿಕೊಳ್ಳಬಾರದು ಎಂದಿದ್ದಾರೆ. ಚಿತ್ರದಲ್ಲಿ ಜಿಎಸ್‌ಟಿ ಸೇರಿದಂತೆ ವಿವಿಧ ಯೋಜನೆಗಳ ಸತ್ಯಾಂಶವನ್ನು
ಮಾತನಾಡಲಾಗಿದೆ. ಆದರೆ, ಬಿಜೆಪಿಯು ತನ್ನ ಅಸಹಿಷ್ಣುತೆಯನ್ನು ಹೊರಹಾಕಿದೆ ಎಂದು ಟೀಕಿಸಿದ್ದಾರೆ. ಉತ್ತರಿಸಿರುವ ತಮಿಳುನಾಡು ಬಿಜೆಪಿ ವಕ್ತಾರ ನಾರಾಯಣ ತಿರುಪತಿ, “ಹೌದು. ಬಿಜೆಪಿ ಅಸಹಿಷ್ಣುತೆ ಹೊಂದಿದೆ. ಆದರೆ, ಅದು ದೇಶದ ವಿಚಾರಕ್ಕೆ ಮಾತ್ರ ಸೀಮಿತ. ಸಿಂಗಾಪುರದಲ್ಲಿ ಉಚಿತವಾಗಿ ವೈದ್ಯಕೀಯ ಸೇವೆ ನೀಡಲಾಗುತ್ತಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ವರಮಾನದ ಶೇ.
10ರಷ್ಟನ್ನು ಅಲ್ಲಿನ ಸರ್ಕಾರ ವೈದ್ಯಕೀಯ ವಿಮೆ ಹೆಸರಿನಲ್ಲಿ ವಸೂಲಿ ಮಾಡುತ್ತಿದೆ. ಹಾಗಾಗಿ, ಅಲ್ಲಿ ಕೆಲ ವೈದ್ಯಕೀಯ ಸೇವೆಗಳನ್ನು ಮಾತ್ರ ಉಚಿತವಾಗಿ ನೀಡಲಾಗುತ್ತಿದೆ’ ಎಂದಿದ್ದಾರೆ. ದೇಗುಲಗಳ ಬದಲು ಆಸ್ಪತ್ರೆಗಳೇ ಇರಲಿ ಎಂಬ ಡೈಲಾಗ್‌ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ತಮಿಳುನಾಡಿನಲ್ಲಿ ಕೇವಲ 20 ವರ್ಷಗಳ ಹಿಂದೆ ಚರ್ಚ್‌ಗಳ ನಿರ್ಮಾಣ ಶುರುವಾಯಿತು. ದೇಗುಲಗಳು, ಮಸೀದಿಗಳು
ಅದಕ್ಕಿಂತ ಹಿಂದಿನಿಂದಲೇ ಇದ್ದವು ಎಂದು ಸರಣಿ ಟ್ವೀಟ್‌ನಲ್ಲಿ ಪ್ರತಿಕ್ರಿಯೆ ನೀಡಿದೆ.

ವೈದ್ಯರಿಗೂ ಅಸಮಾಧಾನ: ನಟರಿಬ್ಬರ ಮಾತುಗಳು ರಾಜಕೀಯ ‌ಕ್ಷೇತ್ರದಲ್ಲಿ ಅತೃಪ್ತಿಯ ಢಾಳು ಏಳಿಸಿದಷ್ಟೇ ವೈದ್ಯಕೀಯ ರಂಗದಲ್ಲಿಯೂ ಪ್ರತಿಕ್ರಿಯೆ ಹೊರಹೊಮ್ಮಿಸಿದೆ. ತಮಿಳುನಾಡಿನ ವೈದ್ಯರ ಒಕ್ಕೂಟ ಸಿನಿಮಾ ಹಿಷ್ಕರಿಸುವುದಾಗಿ ಹೇಳಿದೆ. ಕೋರ್ಟ್‌ ಅಥವಾ ಮಾಧ್ಯಮಗಳ ಮೊರೆ ಹೋಗದೆ ಶಾಂತಿಯುತವಾಗಿ ಪ್ರತಿ ಭಟನೆ ನಡೆಸುತ್ತೇವೆ. ವೆಬ್‌ಸೈಟ್‌ನಲ್ಲಿ ವಿವಾದಿತ ಡೈಲಾಗ್‌ಗಳಿರುವ ಲಿಂಕ್‌ಗಳನ್ನು ಹಂಚುತ್ತೇವೆ ಎಂದು ವೈದ್ಯರ ಒಕ್ಕೂಟ ಹೇಳಿದೆ.

-ಉದಯವಾಣಿ

Comments are closed.