
ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಕ್ರಿಕೆಟ್ ಪಂದ್ಯ ಮುಂಬೈನಲ್ಲಿ ನಡೆಯುತ್ತಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಡಿಸಿದ ಸಿಕ್ಸರ್ ಅನ್ನು ಬೌಂಡರಿಯಲ್ಲಿ ಬಾಲ್ ಬಾಯ್ ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.
ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನು ನಾಯಕ ವಿರಾಟ್ ಕೊಹ್ಲಿ 41 ರನ್ ಗಳಿಸಿದ್ದಾಗ ಆ್ಯಡಮ್ ಮಿಲ್ನೆ ಎಸೆತವನ್ನು ಸಿಕ್ಸರ್ ಸಿಡಿಸಿದರು. ಈ ವೇಳೆ ಬೌಂಡರಿಯಲ್ಲಿ ಬಾಲ್ ಬಾಯ್ ಅದ್ಭುತವಾಗಿ ಜಿಗಿದು ಒಂದೇ ಕೈನಲ್ಲಿ ಕ್ಯಾಚ್ ಅನ್ನು ಹಿಡಿದರು. ಈ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಜೋರಾಗಿ ಕೂಗುತ್ತಾ ಕರತಾಂಡವ ಮಾಡಿದರು.
ಇನ್ನು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಬಾಲ್ ಬಾಯ್ ಹರ್ಷ ವ್ಯಕ್ತಪಡಿಸುತ್ತಾ ಬೌಂಡರಿ ಗೆರೆ ಬಳಿ ನಿಂತು ಸಂತೋಷದಿಂದ ಪ್ರೇಕ್ಷಕರನ್ನು ನೋಡುತ್ತಾ ಕುಳಿತ.
Comments are closed.