ಮನೋರಂಜನೆ

ಅಳುತ್ತಲೇ ಬಿಗ್‌ಮನೆಯಿಂದ ಹೊರ ಬಂದ ಸುಮಾ! ಮೊದಲ ವಾರವೇ ಔಟ್ !

Pinterest LinkedIn Tumblr

ಬಿಗ್‌ಬಾಸ್‌ ಮನೆಯಿಂದ ಮೊದಲ ವಾರ ಯಾರು ಹೊರಹೋಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು.

ಬಿಗ್‌ಬಾಸ್‌ ಸೀಸನ್‌ 5 ರ ಮೊದಲ ದಿನವೇ ಏಳು ಜನರನ್ನು ನಾಮಿನೇಟ್‌ ಮಾಡಿದ್ದರು ಬಿಗ್‌ಬಾಸ್‌. ಕ್ಯಾಪ್ಟನ್‌ ಅನುಪಮಾರನ್ನು ಹೊರತುಪಡಿಸಿ ಉಳಿದ ಸದಸ್ಯರ ಹೆಸರನ್ನು ನಾಮಿನೇಟ್ ಮಾಡಬಹುದಾಗಿತ್ತು. ಮನೆಯ ಸದಸ್ಯರು ನೀಡಿರುವ ವೋಟ್ ಪ್ರಕಾರ ದಿವಾಕರ್, ಜಗನ್ನಾಥ್, ಜಯರಾಮ್ ಕಾರ್ತಿಕ್, ಮೇಘಾ, ಜಯ ಶ್ರೀನಿವಾಸನ್, ಸುಮಾ ನಾಮಿನೇಟ್ ಆಗಿದ್ದರೆ, ಕ್ಯಾಪ್ಟನ್ ಮೂಲಕ ನಿವೇದಿತಾ ಗೌಡ ನೇರವಾಗಿ ನಾಮಿನೇಟ್ ಆಗಿದ್ದರು.

ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜತೆಯಲ್ಲಿ ನಾಮಿನೇಟ್‌ ಪ್ರಕ್ರಿಯೆ ನಡೆಯಿತು. ಈ ವೇಳೆ ಮೊದಲಿಗೆ ಜಯ್‌ ಶ್ರೀನಿವಾಸನ್‌ ಸೇಫ್‌ ಆದ್ರು. ಬಳಿಕ ಜೆಕೆ, ನಿವೇದಿತಾ ಗೌಡ, ದಿವಾಕರ್‌, ಜಗನ್‌ ಹಾಗೂ ಕೊನೆಯದಾಗಿ ಮೇಘಾ ಸೇಫ್‌ ಆದ್ರು. ಆದರೇ ಮೊದಲ ವಾರವೇ ಸುಮಾ ಬಿಗ್‌ ಮನೆಯಿಂದ ಹೊರ ನಡೆದ್ರು. ಬಿಗ್‌ ಬಾಸ್‌ನಿಂದ ಗೇಟ್‌ ಪಾಸ್‌ ಪಡೆದ ಸುಮಾ ಭಾವುಕರಾಗಿ ಮನೆಯಿಂದ ಹೊರಬಿದ್ರು.

Comments are closed.