ರಾಷ್ಟ್ರೀಯ

ನಡೆದುಕೊಂಡು ಹೋಗುತ್ತಿದ್ದ ಒಂಟಿ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್

Pinterest LinkedIn Tumblr

ಕೋಝಿಕೋಡ್: ಒಬ್ಬಂಟಿಯಾಗಿ ನಡೆದುಕೊಂಡು ಯುವತಿಯೊಬ್ಬಳ ಮೇಲೆ ಕಾಮುಕನೊಬ್ಬ ರಸ್ತೆಯಲ್ಲೇ ಮೈಮೇಲೆರಗಿ ಅತ್ಯಾಚಾರಕ್ಕೆ ಯತ್ನಿಸಿರುವ ಹೇಯ ಕೃತ್ಯ ಕೇರಳದಲ್ಲಿ ನಡೆದಿದೆ.

ಬ್ಯಾಗ್ ಹಿಡಿದುಕೊಂಡು ಒಂಟಿಯಾಗಿ ತೆರಳುತ್ತಿದ್ದ ಯುವತಿಯನ್ನು ಗಮನಿಸಿದ ಯುವಕನೊಬ್ಬ ಆಕೆ ಮುಂದೆ ನಡೆದುಕೊಂಡು ಹೋಗಿದ್ದಾನೆ. ಯಾರು ಓಡಾದದ್ದನ್ನು ಗಮನಿಸಿದ ಕಾಮಾಂಧ ಏಕಾಏಕಿ ಯುವತಿಯನ್ನು ಹಿಡಿದು ಎಳೆದಾಡಿದ್ದಾನೆ. ಈ ವೇಳೆ ಯುವತಿ ಜೋರಾಗಿ ಕಿರುಚಿಕೊಂಡಿದ್ದು ಆಕೆಯನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.

ಕಾಮಾಂಧ ಯುವತಿಗೆ ಲೈಂಗಿಕ ಕಿರುಕುಳ ನೀಡಿ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Comments are closed.