ಕ್ರೀಡೆ

ಸಾಮಾಜಿಕ ಜಾಲತಾಣಗಳಲ್ಲಿ ದೋನಿಯಷ್ಟೆ ವೇಗದಲ್ಲಿ ಹೆಚ್ಚುತ್ತಿದೆ ಮಗಳು ಝಿವಾ ಹವಾ

Pinterest LinkedIn Tumblr

ನವದೆಹಲಿ: ಭಾರತೀಯ ಕ್ರಿಕೆಟ್‌ನಲ್ಲಿ ಟಿ–20 ವಿಶ್ವಕಪ್‌ ಹಾಗೂ ಏಕದಿನ ವಿಶ್ವಕಪ್‌ ಪ್ರಶಸ್ತಿಯನ್ನು ಗೆದ್ದುಕೊಟ್ಟ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರಿಗೆ ವಿಶ್ವದದ್ಯಾಂತ ಆಪಾರ ಅಭಿಮಾನಿಗಳ ಬಳಗ ಇರುವುದು ಎಲ್ಲರಿಗೂ ತಿಳಿದ ವಿಷಯ.

ಸದ್ಯ ಇದೀಗ ಎಂ.ಎಸ್‌. ದೋನಿಯಷ್ಟೆ ವೇಗದಲ್ಲಿ ಮಗಳು ಝಿವಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾಳೆ.

ಇತ್ತೀಚಿಗಷ್ಟೆ ನಡೆದ ಸೆಲೆಬ್ರಿಟಿ ಫುಟ್‌ಬಾಲ್‌ ಪಂದ್ಯದ ವೇಳೆ ಮಗಳು ಝಿವಾ ಅಪ್ಪನಿಗೆ ನೀರು ಕುಡಿಸುತ್ತಿರುವ ದೃಶ್ಯ ಹೆಚ್ಚು ಆಕರ್ಷಣೀಯವಾಗಿದ್ದು, ಹೆಚ್ಚು ಗಮನ ಸೆಳೆದಿತ್ತು.

ಝಿವಾ ಹೆಸರಿನ ಇನ್‌ಸ್ಟ್ರಾಗ್ರಾಂ ಖಾತೆಯೊಂದು ಸಕ್ರಿಯವಾಗಿದ್ದು, ಝಿವಾ ಚಿತ್ರಗಳನ್ನು ಆಪ್‌ಲೋಡ್‌ ಮಾಡಲಾಗುತ್ತಿದೆ.

Comments are closed.