ಮನೋರಂಜನೆ

ಮದುವೆ ನಂತರ ಕುಕ್ಕಿಂಗ್‌ ಕ್ಲಾಸ್‌ಗೆ ಸಮಂತಾ

Pinterest LinkedIn Tumblr


ಮದುವೆ ಬಳಿಕ ವೃತ್ತಿ ಬದುಕಿನಲ್ಲಿ ಚಿಕ್ಕ ಬ್ರೇಕ್‌ ತೆಗೆದುಕೊಂಡಿರುವ ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾ ಹೊಸ ಹವ್ಯಾಸವೊಂದನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆ ಹೊಸ ಹವ್ಯಾಸ ಏನಪ್ಪಾ ಅಂದರೆ ಅಡುಗೆ ಮಾಡುವುದು. ಹೌದು ಅಡುಗೆ ಬಗ್ಗೆ ಆಸಕ್ತಿ ಬಂದ ಕಾರಣ ಸಮಂತಾ ಕುಕ್ಕಿಂಗ್‌ ಕ್ಲಾಸ್‌ಗೆ ಸೇರಿದಾರಂತೆ.

ಈ ಮೊದಲು ನಾಗನಚೈತನ್ಯ ಅಡುಗೆ ಮಾಡುತ್ತಿರುವ ಫೋಟೋ ಹಾಕಿ ಅಡುಗೆ ಗೊತ್ತಿರುವ ಬಾಯ್‌ ಫ್ರೆಂಡ್‌ ಸಿಕ್ಕಿರುವಾಗ ಅಡುಗೆ ಕಲಿಯುವ ಅವಶ್ಯಕತೆ ನನಗಿಲ್ಲ, ನಾನು ತುಂಬಾ ಲಕ್ಕಿ ಎಂದು ಟ್ವೀಟ್‌ ಮಾಡಿದ್ದರು. ಆದರೆ ಮದುವೆಯ ಬಳಿಕ ತಾವೂ ಕಲಿಯುವ ಮನಸ್ಸು ಮಾಡಿದ್ದಾರೆ.

ಗಂಡನನ್ನು ಮೋಡಿ ಮಾಡುವ ಗುಟ್ಟು ಹೆಂಡತಿಯ ಕೈ ಅಡುಗೆಯಲ್ಲಿದೆ ಎಂಬ ಸಂಸಾರದ ಗುಟ್ಟನ್ನು ಸಮಂತಾಗೆ ಯಾರೋ ಹೇಳಿರಬೇಕು ಅಲ್ವಾ?

ಸಮಂತಾ ಅಭಿನಯದ ತೆಲುಗು ಚಿತ್ರ ರಾಜುಗಾರಿಗದ್ದಿ 2 , ತಮಿಳು ಚಿತ್ರ ಮೆರ್ಸೆಲ್‌ ಸೂಪರ್‌ ಹಿಟ್‌ ಆಗಿವೆ.

Comments are closed.