ಕರ್ನಾಟಕ

ಟಿಪ್ಪು ಜಯಂತಿಗೆ ತೀವ್ರ ವಿರೋಧ: ಮುತಾಲಿಕ್

Pinterest LinkedIn Tumblr


ಬಾಗಲಕೋಟ: ನವೆಂಬರ್‌ 10ರಂದು ಸರಕಾರ ಆಚರಿಸಲು ಉದ್ದೇಶಿಸಿರುವ ಟಿಪ್ಪು ಸುಲ್ತಾನ್‌ ಜಯಂತಿಗೆ ಶ್ರೀರಾಮಸೇನೆ ವರಿಷ್ಠ ಪ್ರಮೋದ್‌ ಮುತಾಲಿಕ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಹಿಂದೂ ದ್ರೋಹಿ, ಕನ್ನಡ ದ್ರೋಹಿ, ದೇವಸ್ಥಾನಗಳನ್ನು ಒಡೆದು ಹಾಕಿದ್ದಾನೆ. ಟಿಪ್ಪು ಜಯಂತಿ ಆಚರಣೆ ಹೇಯ ಕೆಲಸ, ಇದು ಕನ್ನಡಿಗರನ್ನು ಅವಮಾನಿಸಿದಂತೆ ಎಂದು ಮುತಾಲಿಕ್‌ ಪ್ರತಿಪಾದಿಸಿದರು.

ಓಟಿಗಾಗಿ, ರಾಜಕೀಯಕ್ಕಾಗಿ, ಅಧಿಕಾರಕ್ಕಾಗಿ ಟಿಪ್ಪುವಿನ ಇತಿಹಾಸ ತಿರುಚಿದ ಸರಕಾರ ಈ ಜಯಂತಿ ಆಚರಣೆ ಮಾಡುತ್ತಿದೆ ಎಂದು ಅವರು ಟೀಕಿಸಿದರು.

ಮುಂದಿನ ದಿನಗಳಲ್ಲಿ ಟಿಪ್ಪು ಹೇಗಿದ್ದ? ಅವನ ನಿಜವಾದ ಇತಿಹಾಸ ಏನು ಎಂಬುದರ ಕುರಿತು ಲಕ್ಷಾಂತರ ಪುಸ್ತಕಗಳನ್ನು ತಯಾರಿಸಿ ರಾಜ್ಯಾದ್ಯಂತ ಹಂಚಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಮುತಾಲಿಕ್‌ ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸುತ್ತೇವೆ ಎಂಬ ಸಂಸದ ಪ್ರಹ್ಲಾದ ಜೋಷಿ ಹೇಳಿಕೆಯನ್ನು ಪ್ರಮೋದ ಮುತಾಲಿಕ್ ಸ್ವಾಗತಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆ ರದ್ದು ಮಾಡುವುದು ಮಾತ್ರವಲ್ಲ, ಟಿಪ್ಪುವಿನ ಹೆಸರಿನಲ್ಲಿರುವ ಸರ್ಕಲ್’ಗಳು, ನಾಮಫಲಕಗಳು ಎಲ್ಲವನ್ನೂ ತೆಗೆದು ಹಾಕಬೇಕು ಎಂದು ಅವರು ಒತ್ತಾಯಿಸಿದರು.

Comments are closed.