ಮನೋರಂಜನೆ

ಅಜಿತ್‌ರ ಮತ್ತೊಂದು ಚಿತ್ರ ಕನ್ನಡಕ್ಕೆ ಡಬ್‌ ಆಗಿದೆ!

Pinterest LinkedIn Tumblr


ಅಜಿತ್‌ ಅಭಿನಯದ ಇನ್ನೊಂದು ಚಿತ್ರ ಕನ್ನಡಕ್ಕೆ ಡಬ್‌ ಆಗಿದ್ದು, ಬಿಡುಗಡೆಗೆ ಕಾದಿದೆ. ಈ ಬಾರಿ ಡಬ್‌ ಆಗಿರುವ ಚಿತ್ರದ ಹೆಸರು “ಆರಂಭಂ’. ವಿಷ್ಣುವರ್ಧನ್‌ ನಿರ್ದೇಶನದ ಈ ಚಿತ್ರ 2013ರಲ್ಲಿ ಬಿಡುಗಡೆಯಾಗಿತ್ತು. ಅಜಿತ್‌, ಆರ್ಯ, ರಾಣಾ ದಗ್ಗುಬಾಟಿ, ನಯನತಾರಾ, ಕಿಶೋರ್‌ ಮುಂತಾದವರು ನಟಿಸಿದ್ದ ಚಿತ್ರವನ್ನು ಇದೀಗ ಕನ್ನಡಕ್ಕೆ ಡಬ್‌ ಮಾಡಿ, “ಧೀರ’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಅಜಿತ್‌ ಅಭಿನಯದ ಚಿತ್ರವೊಂದು ತಮಿಳಿನಿಂದ ಕನ್ನಡಕ್ಕೆ ಡಬ್‌ ಆಗುತ್ತಿರುವುದು ಇದು ಮೊದಲನೇಲ್ಲ. ಇದಕ್ಕೂ ಮುನ್ನ ಗೌತಮ್‌ ಮೆನನ್‌ ನಿರ್ದೇಶನದ “ಎನ್ನೈ ಅರಿಂದನಾಲ್‌’ ಎಂಬ ಚಿತ್ರವನ್ನು ಕನ್ನಡದಲ್ಲಿ “ಸತ್ಯದೇವ್‌ ಐಪಿಎಸ್‌’ ಎಂಬ ಹೆಸರಿನಲ್ಲಿ ಡಬ್‌ ಮಾಡಲಾಗಿತ್ತು.

ಆದರೆ, ಬಿಡುಗಡೆಯ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಅಲ್ಲಲ್ಲಿ ಚಿತ್ರ ಬಿಡುಗಡೆಯಾದರೂ, ಹೆಚ್ಚು ಸುದ್ದಿಯಾಗಲಿಲ್ಲ. ಆ ಚಿತ್ರವನ್ನು ಕನ್ನಡಕ್ಕೆ ಡಬ್‌ ಮಾಡಿದ್ದ ಜಿ. ಕೃಷ್ಣಮೂರ್ತಿ, ಇದೀಗ ಅಜಿತ್‌ ಅಭಿನಯದ “ಆರಂಭಂ’ ಚಿತ್ರವನ್ನು ಕನ್ನಡಕ್ಕೆ ಡಬ್‌ ಮಾಡಿ ತಂದಿದ್ದಾರೆ. ಈಗಾಗಲೇ ಚಿತ್ರ ಸೆನ್ಸಾರ್‌ ಆಗಿದೆ.

Comments are closed.