ಮನೋರಂಜನೆ

ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದ ‘ರಾಜು ಕನ್ನಡ ಮೀಡಿಯಂ’ ಟ್ರೇಲರ್‌

Pinterest LinkedIn Tumblr


‘ರಾಜು ಕನ್ನಡ ಮೀಡಿಯಂ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಕನ್ನಡದ ಕಂಪನ್ನು ಬೀರುವ ಕತೆ, ನವಿರಾದ ಪ್ರೇಮ, ಇಂಪಾದ ಸಂಗೀತ, ಹಾಸ್ಯ ಚಟಾಕಿಗಳು, ಸುದೀಪ್‌ ಕ್ಲಾಸ್‌ ಲುಕ್ ಅಂಡ್‌ ಮಾಸ್‌ ಡೈಲಾಗ್‌ ಈ ಟ್ರೇಲರ್‌ನ ಹೈಲೈಟ್ಸ್‌. ಟ್ರೇಲರ್‌ ಹಾಕಿದ ಸ್ವಲ್ಪ ಹೊತ್ತಿನಲ್ಲಿಯೇ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

ಕಿಚ್ಚ ಸುದೀಪ್‌, ಗುರುನಂದನ್‌, ಆವಂತಿಕಾ ಶೆಟ್ಟಿ, ಆಶಿಕಾ, ಸಾಧು ಕೋಕಿಲಾ, ಚಿಕ್ಕಣ್ಣ ಪಾತ್ರಗಳು ಗಮನ ಸೆಳೆದಿವೆ. ಸಿನಿ ಪ್ರಿಯರಲ್ಲಿ ‘ರಾಜು ಕನ್ನಡ ಮೀಡಿಯಂ’ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸುವಲ್ಲಿ ಈ ಟ್ರೇಲರ್ ಯಶಸ್ವಿಯಾಗಿದೆ.

Comments are closed.