ಮನೋರಂಜನೆ

ಬಿಗ್​ಬಾಸ್ ಮನೆಯಲ್ಲಿ ಈ ಬಾರಿ ಯಾರೆಲ್ಲ ಟಾರ್ಗೆಟ್ ಆಗಿದ್ದಾರೆ ? ಹೊರಹೋಗುವವರು ಯಾರು ?

Pinterest LinkedIn Tumblr

‘ಬಿಗ್ ಬಾಸ್’ ಮನೆಯೊಳಗೆ ಸ್ಪರ್ಧಿಗಳ ಆಟ ಶುರುವಾಗಿದೆ. ಮೊಟ್ಟ ಮೊದಲ ಬಾರಿಗೆ ಜನಸಾಮಾನ್ಯರು ‘ಬಿಗ್ ಬಾಸ್’ ಮನೆಗೆ ಎಂಟ್ರಿಕೊಟ್ಟಿರುವುದರಿಂದ ಈ ಆವೃತ್ತಿ ಸ್ವಲ್ಪ ಸ್ಪೆಷಲ್ ಏನೋ ಹೌದು. ಆದ್ರೆ, ‘ಬಿಗ್ ಬಾಸ್’ ಮನೆಯೊಳಗೆ ಮೊಟ್ಟ ಮೊದಲ ದಿನವೇ ‘ಜನಸಾಮಾನ್ಯರು’ ಟಾರ್ಗೆಟ್ ಆಗಿದ್ದಾರೆ. ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ, ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಏಳು ಸ್ಪರ್ಧಿಗಳ ಪೈಕಿ ನಾಲ್ವರು ‘ಜನಸಾಮಾನ್ಯ’ರೇ ಇದ್ದಾರೆ.

ಬಿಗ್‌ ಮನೆಯಲ್ಲಿ ಬಿಗ್‌ಬಾಸ್‌ ಆಟ ಶುರುವಾಗಿದೆ. ಮೊದಲ ದಿನವೇ ವಾರದ ಕ್ಯಾಪ್ಟನ್‌ ಆಯ್ಕೆ ಪ್ರಕ್ರಿಯೆ ನಡೆಯಿತು. ಅದರಂತೆ ಅನುಪಮಾ ಮೊದಲ ವಾರದ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ.

ಮನೆಯ ಸದಸ್ಯರೆಲ್ಲಾ ಒಮ್ಮತದಿಂದ ಅಕ್ಕ ಧಾರಾವಾಹಿ ಮೂಲಕ ಫೇಮಸ್ ಆಗಿರುವ ಅನುಪಮಾರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದರು. ಹಾಗಾಗಿ ಈ ವಾರದ ಕ್ಯಾಪ್ಟನ್ ಆಗಿ ಅನುಪಮಾ ಅಧಿಕಾರ ವಹಿಸಿಕೊಂಡಿದ್ದಾರೆ.

ಇನ್ನು ಮೊದಲ ದಿನವೇ ನಾಮಿನೇಶನ್ ಪ್ರಕ್ರಿಯೆ ಪ್ರಾರಂಭವಾಯಿತು. ಅನುಪಮಾರನ್ನು ಹೊರತುಪಡಿಸಿ ಉಳಿದ ಸದಸ್ಯರ ಹೆಸರನ್ನು ನಾಮಿನೇಟ್ ಮಾಡಬಹುದಾಗಿತ್ತು. ಮನೆಯ ಸದಸ್ಯರು ನೀಡಿರುವ ವೋಟ್ ಪ್ರಕಾರ ದಿವಾಕರ್, ಜಗನ್ನಾಥ್, ಜಯರಾಮ್ ಕಾರ್ತಿಕ್, ಮೇಘ, ಜಯ ಶ್ರೀನಿವಾಸನ್, ಸುಮ ನಾಮಿನೇಟ್ ಆಗಿದ್ದರೆ, ನಿವೇದಿತಾ ಗೌಡ ಕ್ಯಾಪ್ಟನ್ ಮುಖಾಂತರ ನೇರವಾಗಿ ನಾಮಿನೇಟ್ ಆಗಿದ್ದಾರೆ.

Comments are closed.