ಬೆಂಗಳೂರು: ಕನ್ನಡದ ಬಿಗ್ಬಾಸ್ ಸೀಸನ್-5 ಶೋನಲ್ಲಿ ಸ್ಪರ್ಧಿಗಳ ವರ್ತನೆ ಹೇಗಿರುತ್ತೆ ಎಂಬುದನ್ನು ತಿಳಿದುಕೊಳ್ಳಲು ಕನಿಷ್ಠ 10 ಕಂತುಗಳಾದರೂ ಬೇಕು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅದಾಗಲೇ ಸ್ಪರ್ಧಿಗಳನ್ನು ತಮಾಷೆ ಮಾಡುವ ಕಾರ್ಯ ಶುರುವಾಗಿದೆ.
ಅದರಲ್ಲಿ ಅತಿಹೆಚ್ಚು ಚರ್ಚೆಯಾಗಿದ್ದು ಡಬ್ಸ್ಮ್ಯಾಷ್ ಪ್ರವೀಣೆ ನಿವೇದಿತಾ. ಹೌದು, ಈ ಸಲದ ಬಿಗ್ಬಾಸ್ನ ವಿಶೇಷತೆಗಳಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು ‘ಜನಸಾಮಾನ್ಯ’ ಕಾನ್ಸೆಪ್ಟ್. ಆ ವಿಶೇಷ ಕೆಟಗೆರಿಯಿಂದ ಬಂದ ನಿವೇದಿತಾ, ಬಿಗ್ವುನೆಯಲ್ಲಿನ ಸೆಲೆಬ್ರಿಟಿಗಳಿಗಿಂತ ಫೇಮಸ್ ಆಗುತ್ತಿದ್ದಾರೆ. ಕನ್ನಡ ಸಿನಿಮಾಗಳ ಡೈಲಾಗ್ ಹಾಗೂ ಹಾಡುಗಳನ್ನು ಡಬ್ಸ್ಮ್ಯಾಷ್ ಮಾಡುವ ಅವರು, ಮಾತಿನ ಮಧ್ಯೆ ಇಂಗ್ಲಿಷ್ ಬಳಸುವುದು ಹೆಚ್ಚು. ಹೀಗಾಗಿಯೇ ‘ಬ್ರಿಟಿಷರು ಹೋಗುವಾಗ ಹೂತಿಟ್ಟಿದ್ದ ನಿಧಿ ಇವತ್ತು ಕರ್ನಾಟಕದಲ್ಲಿ ಸಿಕ್ತು’, ‘ಸಂಜನಾ ಅವರ ಎರಡನೇ ಅವತರಣಿಕೆ’ ಎಂದು ನಿವೇದಿತಾ ಹೆಸರಲ್ಲಿ ಜೋಕ್ಗಳು ಹರಿದಾಡುತ್ತಿವೆ. ನೋಡುಗರಿಗೆ ನಗು ಉಕ್ಕಿಸುತ್ತಿವೆ. ಸಂಖ್ಯಾಶಾಸ್ತ್ರಜ್ಞ ಜಯ ಶ್ರೀನಿವಾಸನ್, ಕಾಮನ್ವ್ಯಾನ್ ಲಿಸ್ಟ್ನಲ್ಲಿ ಬಂದಿರುವ ಮೇಘಾ ಬಗ್ಗೆಯೂ ಟ್ರೋಲ್ ಮಾಡಲಾಗುತ್ತಿದೆ. ಪರಿಣಾಮ, ಬಿಗ್ಬಾಸ್ ಬಗ್ಗೆ ನೋಡುಗರಲ್ಲಿ ಕುತೂಹಲ ಹೆಚ್ಚಾಗುತ್ತಿದೆ. ಶೋ ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರಿತುಕೊಳ್ಳುವಲ್ಲಿ ಬಿಜಿಯಾಗಿದ್ದಾರೆ. ಆಟ ಆರಂಭವಾಗುವುದಕ್ಕೂ ಮುನ್ನ ಮನರಂಜನೆ ನೀಡುತ್ತಿದ್ದಾರೆ. ಇತ್ತ ಕಳೆದ ಸೀಸನ್ಗಿಂತ ಹೊಸತನ್ನು ನೀಡಬೇಕೆಂಬ ತುಡಿತದಲ್ಲಿ ‘ಬಿಗ್ಬಾಸ್’ ಆಯೋಜಕರು ಪ್ಲ್ಯಾನ್ ರೂಪಿಸಿದ್ದಾರೆ.
Comments are closed.