ಮನೋರಂಜನೆ

ಅಂಬಾರಿ, ಅದ್ಧೂರಿ ಚಿತ್ರ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್‌ರ ‘ಕಿಸ್’ ಚಿತ್ರದಲ್ಲಿ ಹೊಸ ಮುಖಗಳು!

Pinterest LinkedIn Tumblr


ಅಂಬಾರಿ, ಅದ್ಧೂರಿ ಚಿತ್ರ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್ ಅವರು ತಮ್ಮ ಮುಂದಿನ ಕಿಸ್ ಚಿತ್ರದಲ್ಲಿ ನವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ವಿರಾಟ್ ಮತ್ತು ನಾಯಕಿಯಾಗಿ ಶ್ರೀಲೀಲಾ ಅಭಿನಯಿಸಲಿದ್ದಾರೆ.
ವಾಲಂಟೈನ್ಸ್ ಡೇ ವಿಶೇಷವಾಗಿ ನಟ-ನಟಿಯ ಫೋಟೋಶೂಟ್ ಮಾಡಿಸಲಾಗಿದೆ ಎಂದು ನಿರ್ದೇಶಕ ಅರ್ಜುನ್ ಹೇಳಿದ್ದಾರೆ. ಈ ಫೋಟೋಗಳನ್ನು ನೋಡಿದರೇ ಪ್ರೀತಿಯಲ್ಲಿ ಬಿದ್ದವರು ಕಿಸ್ ಮಾಡಬೇಕೆನಿಸುತ್ತದೆ ಎಂದರು.
ಏಳೆಂಟು ತಿಂಗಳ ಹಿಂದೆಯೇ ಚಿತ್ರವನ್ನು ಘೋಷಿಸಿದ್ದ ಅರ್ಜುನ್ ಚಿತ್ರದ ಪಾತ್ರಧಾರಿಗಳ ಆಯ್ಕೆಗಾಗಿ ಸರಿಸುಮಾರು ಏಳೆಂಟು ತಿಂಗಳ ಕಾಲ ತೆಗೆದುಕೊಂಡಿದ್ದು ಅಂತಿಮವಾಗಿ ತಾವು ಅಂದುಕೊಂಡಂತಹ ಪಾತ್ರಧಾರಿಗಳು ಸಿಕ್ಕಿದ್ದು ಇನ್ನೇನು ಚಿತ್ರದ ಶೂಟಿಂಗ್ ಪ್ರಾರಂಭಿಸುವುದಾಗಿ ಹೇಳಿದ್ದಾರೆ.
ಹೊಸ ಮುಖಗಳ ಅನ್ವೇಷಣೆಯಲ್ಲಿದ್ದ ನಿರ್ದೇಶಕರು ನಾಯಕಿಗಾಗಿ ಸರಿಸುಮಾರು 200 ಯುವತಿಯರ ಸ್ಕ್ರೀನ್ ಟೆಸ್ಟ್ ಮಾಡಿಸಿದ್ದು ಅದರಲ್ಲಿ 17 ವರ್ಷದ ಶ್ರೀಲೀಲಾ ಅವರು ಕೊನೆಗೆ ಆಯ್ಕೆಯಾಗಿದ್ದಾರೆ. ಶ್ರೀಲೀಲಾ ಸದ್ಯ ಬಿಷಪ್ ಕಾಟನ್ ಕಾಲೇಜಿನಲ್ಲಿ ಪಿಯು ಓದುತ್ತಿದ್ದಾರೆ.

Comments are closed.