ಮನೋರಂಜನೆ

ಬಾಹುಬಲಿ–2ರಲ್ಲಿ ಶಾರುಕ್‌ ಖಾನ್‌ ಇಲ್ಲ!: ಚಿತ್ರತಂಡದ ಅಧಿಕೃತ ಟ್ವೀಟ್‌

Pinterest LinkedIn Tumblr


ಮುಂಬೈ: ಬಹು ನಿರೀಕ್ಷಿತ ಸಿನಿಮಾ ‘ಬಾಹುಬಲಿ–2’ ಅಂತಿಮ ಭಾಗದಲ್ಲಿ ಶಾರುಕ್‌ ಖಾನ್‌ ಯಾವುದೇ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ ಎಂಬ ಸುದ್ದಿ ಕಿಂಗ್‌ಖಾನ್‌ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಾಹುಬಲಿ–2 ಚಿತ್ರದಲ್ಲಿ ಶಾರುಕ್‌ ಖಾನ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕುರಿತು ಫೋಟೋ ಸಹಿತ ಸುದ್ದಿ ಹರಿದಾಡಿತ್ತು. ಆದರೆ, ಇದು ‘ಸುಳ್ಳು ಸುದ್ದಿ’ ಎನ್ನುವ ಮೂಲಕ ಬಾಹುಬಲಿ ಚಿತ್ರತಂಡ ಚರ್ಚೆಗೆ ತೆರೆಯೆಳೆದಿದೆ.

Baahubali ✔ @BaahubaliMovie
We would have loved to have @iamsrk in our movie ! Who wouldn’t ? But unfortunately it’s a rumour! Not true ! #Baahubali2
3:52 PM – 14 Feb 2017
705 705 Retweets 933 933 likes
‘ಯಾರಿಗೆ ತಾನೇ ಶಾರುಕ್‌ ನಮ್ಮ ಸಿನಿಮಾದಲ್ಲಿ ಇರಲಿ ಎಂಬುದು ಇಷ್ಟವಿರುವುದಿಲ್ಲ? ಇದು ಇಷ್ಟದ ವಿಚಾರವೇ. ಆದರೆ, ದುರದೃಷ್ಟವಶಾತ್‌ ಇದು ಸುಳ್ಳು ಸುದ್ದಿ’ ಎಂದು ಚಿತ್ರದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಲಾಗಿದೆ.

ಅನುಷ್ಕಾ ಶೆಟ್ಟಿ, ಪ್ರಭಾಸ್‌ ಮುಂತಾದವರ ಅಭಿನಯವಿರುವ ಬಾಹುಬಲಿ–2 ಸಿನಿಮಾ ಏಪ್ರಿಲ್‌ 28ರಂದು ತೆರೆಕಾಣಲಿದೆ.

Comments are closed.